ADVERTISEMENT

ಕಾಡುಪ್ರಾಣಿಗಳಿಗೂ ನೀರಿನ ಕೊರತೆ

ಜೊಯಿಡಾ: ಸೂಪಾ ಅಣೆಕಟ್ಟೆಯ ಹಿನ್ನೀರಿಗೆ ಹಿಂಡುಹಿಂಡಾಗಿ ಧಾವಿಸಿದ ಕಾಡುಕೋಣಗಳು

​ಪ್ರಜಾವಾಣಿ ವಾರ್ತೆ
Published 9 ಮೇ 2019, 12:36 IST
Last Updated 9 ಮೇ 2019, 12:36 IST
ಜೊಯಿಡಾ ಸಮೀಪದ ಸೂಪಾ ಜಲಾಶಯದ ಹಿನ್ನೀರಿನ ದೊಣಪಾ ಪ್ರದೇಶದಲ್ಲಿ ಕಾಡುಕೋಣಗಳು ಬುಧವಾರ ನೀರು ಕುಡಿಯಲು ಹಿಂಡು ಹಿಂಡಾಗಿ ಬಂದವು
ಜೊಯಿಡಾ ಸಮೀಪದ ಸೂಪಾ ಜಲಾಶಯದ ಹಿನ್ನೀರಿನ ದೊಣಪಾ ಪ್ರದೇಶದಲ್ಲಿ ಕಾಡುಕೋಣಗಳು ಬುಧವಾರ ನೀರು ಕುಡಿಯಲು ಹಿಂಡು ಹಿಂಡಾಗಿ ಬಂದವು   

ಜೊಯಿಡಾ: ಸೂಪಾ ಅಣೆಕಟ್ಟಿನ ಸುತ್ತಮುತ್ತಲಿನಅರಣ್ಯ ಈ ಬಾರಿ ಬಿಸಿಲಿಗೆ ಬಾಡಿದೆ.ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಹಳ್ಳಕೊಳ್ಳಗಳು ಬತ್ತಿಹೋಗಿವೆ. ಹೀಗಾಗಿ ಕಾಡುಪ್ರಾಣಿಗಳು ದಾಹ ತೀರಿಸಿಕೊಳ್ಳಲು ನಾಡು, ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿವೆ. ಇಂತಹ ದೃಶ್ಯವೊಂದು ಜಲಾಶಯದ ಹಿನ್ನೀರಿನ ದೊಣಪಾ ಪ್ರದೇಶದಲ್ಲಿ ಬುಧವಾರ ಕಂಡುಬಂತು.

ಅರಣ್ಯ ಇಲಾಖೆಯಿಂದ ಪ್ರಯತ್ನ:ಅರಣ್ಯ ಇಲಾಖೆಯು ಕಾಳಿ ಸಂರಕ್ಷಿತ ಪ್ರದೇಶವಾದ ವಿನೋಲಿ, ಪಣಸೋಲಿ, ಕುಳಗಿ, ಅಣಶಿ ಸೇರಿದಂತೆ ವನ್ಯಜೀವಿ ವಲಯ ಹಾಗೂ ನಾಡಂಚಿನ ಅರಣ್ಯ ಪ್ರದೇಶದಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿದೆ.ಆದರೆ, ಇದು ಕಾಡುಪ್ರಾಣಿಗಳಿಗೆ ಸಾಕಾಗುತ್ತಿಲ್ಲ. ಜಲಮೂಲವನ್ನು ಅರಸಿನಾಡಿನತ್ತ ಹಾಗೂ ಸೂಪಾ ಜಲಾಶಯದ ಹಿನ್ನೀರಿನತ್ತ ಬರುತ್ತಿವೆ.

ಅಪಾಯದ ಪಯಣ:ಕಾಡುಕೋಣಗಳು, ಚಿಗರೆ, ಸಾರಂಗ, ವಿವಿಧಜಾತಿಯಸಸ್ತನಿಗಳು, ಆನೆಗಳು ಕೂಡಾ ಜಲಾಶಯದ ನೀರಿನತ್ತಓಡೋಡಿ ಬರುತ್ತಿವೆ. ಇದು ದಿನನಿತ್ಯದ ದೃಶ್ಯವಾಗಿದೆ. ಜೀವಜಲದ ದಾಹ ತೀರಿಸಿಕೊಳ್ಳುವ ಈ ಪಯಣದಲ್ಲಿ ರಸ್ತೆ ಅಂಚಿನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪುವ ಸಂಭವ ಕೂಡ ಇದೆ.ಕಾಡು ಪ್ರಾಣಿಗಳುನಾಯಿ, ಕಳ್ಳ ಬೇಟೆಗಾರರ ಜಾಲಕ್ಕೆ ಸಿಲುಕುವ ಅಪಾಯವಿದೆ. ದಾರಿಯಲ್ಲಿ ಗಾಬರಿಯಾಗುವ ಕಾಡುಪ್ರಾಣಿಗಳು ಮನುಷ್ಯರಿಗೂ ಅಪಾಯ ತರುವ ಸಾಧ್ಯತೆಯಿದೆ.

ADVERTISEMENT

ಅರಣ್ಯ ಇಲಾಖೆಯು ಕಾಡಿನ ಒಳಗೆ ಸಾಧ್ಯವಾದಷ್ಟು ಕೆರೆ ಕಟ್ಟೆಗಳಿಗೆ ನೀರುತುಂಬಬೇಕು. ಈಮೂಲಕ ಕಾಡು ಪ್ರಾಣಿಗಳು ಜೀವಜಲಕ್ಕಾಗಿ ನಾಡಿನತ್ತ ಬರುವ ಪ್ರಮೇಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದುಪ್ರಾಣಿಪ್ರಿಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.