ADVERTISEMENT

ಗಿಡ ಬೆಳೆಸಿದರೆ ವನಮಹೋತ್ಸವ: ಕಳವೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 15:13 IST
Last Updated 3 ಆಗಸ್ಟ್ 2021, 15:13 IST
ಶಿರಸಿ ತಾಲ್ಲೂಕಿನ ಕೆಂಗ್ರೆಮಠದ ಶ್ರೀ ಆಯುರ್ವೇದಿಕ್ ಫಾರ್ಮಾಸ್ಯುಟಿಕಲ್ಸ್ ಆವರಣದಲ್ಲಿ ವನಮಹೋತ್ಸವ ನಡೆಯಿತು
ಶಿರಸಿ ತಾಲ್ಲೂಕಿನ ಕೆಂಗ್ರೆಮಠದ ಶ್ರೀ ಆಯುರ್ವೇದಿಕ್ ಫಾರ್ಮಾಸ್ಯುಟಿಕಲ್ಸ್ ಆವರಣದಲ್ಲಿ ವನಮಹೋತ್ಸವ ನಡೆಯಿತು   

ಶಿರಸಿ: ‘ಗಿಡ ನೆಟ್ಟ ಮಾತ್ರಕ್ಕೆ ವನಮಹೋತ್ಸವ ಆಚರಣೆ ಆಗದು. ನೆಟ್ಟ ಗಿಡ ಬೆಳೆಸುವ ಮೂಲಕ ಆಚರಣೆಗೆ ಅರ್ಥ ನೀಡಬೇಕು’ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ತಾಲ್ಲೂಕಿನ ಕೆಂಗ್ರೆಮಠದ ಶ್ರೀ ಆಯುರ್ವೇದಿಕ್ ಫಾರ್ಮಾಸುಟಿಕಲ್ಸ್ ಆವರಣದಲ್ಲಿ ಹುಲೇಕಲ್ ಅರಣ್ಯ ವಲಯದ ಸಹಯೋಗದಲ್ಲಿ ಸೋಮವಾರ ನಡೆದ ಹಿಂದಿನ ವರ್ಷ ನೆಟ್ಟ ಗಿಡಗಳ ಅವಲೋಕನ ಮತ್ತು ವನ ಮಹೋತ್ಸವ ಮುಂದುವರಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜನಪದ ಹಾಗೂ ಪಾರಂಪರಿಕ ವೈದ್ಯ ಸಂಘದ ಜಿಲ್ಲಾ ಘಟಕದ ಪ್ರಧಾನ ಸಂಯೋಜಕ ವಿಶ್ವನಾಥ ಹೆಗಡೆ ಕಡಬಾಳ, ‘ಕಳೆದ ವರ್ಷ ನೆಟ್ಟಿದ್ದ ಗಿಡಗಳಲ್ಲಿ ಶೇ 85ರಷ್ಟು ಗಿಡಗಳು ಬದುಕಿದ್ದು ಅವು ಉತ್ತಮ ಬೆಳವಣಿಗೆ ಕಾಣುತ್ತಿವೆ’ ಎಂದರು.

ADVERTISEMENT

ಪಾರಂಪರಿಕ ವೈದ್ಯ ಶ್ರೀಧರ ಹೆಗಡೆ ನಕ್ಷೆ ಅವರನ್ನು ಸನ್ಮಾನಿಸಲಾಯಿತು.

ಆರ್.ಎಫ್.ಒ ಮಂಜುನಾಥ ಹೆಬ್ಬಾರ್, ಪ್ರಮುಖರಾದ ರವಿ ಹಳದೋಟ, ನರಸಿಂಹ ಹೆಗಡೆ ಬಕ್ಕಳ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ವಿ.ಹೆಗಡೆ, ಡಾ.ಹೇಮರೆಡ್ಡಿ ಬಿ.ನೀಲಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.