ADVERTISEMENT

30ರಂದು ‘ಯಕ್ಷಹಂಸ’ ಸಂಸ್ಮರಣ ಗ್ರಂಥ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 20:33 IST
Last Updated 24 ಏಪ್ರಿಲ್ 2024, 20:33 IST
‘ಯಕ್ಷಹಂಸ’ ಗ್ರಂಥ
‘ಯಕ್ಷಹಂಸ’ ಗ್ರಂಥ   

ಶಿರಸಿ: ಬದುಕನ್ನು ಯಕ್ಷಗಾನಕ್ಕೆ ಮೀಸಲಿಟ್ಟು ಕಲಾಕ್ಷೇತ್ರಕ್ಕೆ ಕೊಡುಗೆ ನೀಡಿದ ಹೊಸ್ತೋಟ ಮಂಜುನಾಥ ಭಾಗವತರ ಕುರಿತ ‘ಯಕ್ಷಹಂಸ’ ಸ್ಮರಣ ಗ್ರಂಥದ ಬಿಡುಗಡೆ ಸಮಾರಂಭ ಏಪ್ರಿಲ್ 30ರಂದು ಸಂಜೆ 4 ಗಂಟೆಗೆ ನಗರದ ಸುಪ್ರಿಯಾ ಸಭಾಂಗಣದಲ್ಲಿ ನಡೆಯಲಿದೆ.

ಗ್ರಂಥದ ಪ್ರಧಾನ ಸಂಪಾದಕಿ ವಿಜಯನಳಿನಿ ರಮೇಶ, ಮಾರ್ಗದರ್ಶಕ ಎಂ. ಪ್ರಭಾಕರ ಜೋಶಿ, ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ, ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಸಮಾರಂಭದಲ್ಲಿ ಭಾಗವಹಿಸುವರು

ನಾಲ್ಕು ವಿಭಾಗ ಮತ್ತು 520 ಪುಟಗಳುಳ್ಳ ಕೃತಿಯಲ್ಲಿ ಒಟ್ಟು 76 ಲೇಖನಗಳಿವೆ. ಭಾಗವತರ ಸಂಶೋಧನಾತ್ಮಕ ಮತ್ತು ತಾತ್ವಿಕತೆಗೆ ಸಂಬಂಧಿಸಿದ ಕಾರ್ಯಗಳ ಕುರಿತು ವಿಶ್ಲೇಷಣೆ, ಹಳೆಯ ವಿಷಯಗಳನ್ನು ಹೊಸ ರೀತಿಯಲ್ಲಿ ವ್ಯಕ್ತಪಡಿಸಿದ ಪ್ರಸಂಗ ಗುಚ್ಛಗಳ ಪರಾಮರ್ಶೆ, ಯಕ್ಷಗಾನ ವಿಸ್ತರಣೆಯ ಚಿತ್ರಣವಿದೆ. ಭಾಗವತರ ಒಡನಾಡಿಗಳು, ಅಭಿಮಾನಿಗಳು, ಶಿಷ್ಯವೃಂದ, ಕಲಾಕ್ಷೇತ್ರದ ಸಹವರ್ತಿಗಳ ಬರಹಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.