(ಸಾಂದರ್ಭಿಕ ಚಿತ್ರ)
ಯಲ್ಲಾಪುರ: ತಾಲ್ಲೂಕಿನ ಮಾವಿನಮಕಟ್ಟಾ ಸಮೀಪದ ಬೆಳ್ಳಂಬಿ ಗ್ರಾಮದಲ್ಲಿ ಭಾನುವಾರ ಮಗನೇ ಅಪ್ಪನನ್ನು ಕೊಡಲಿಯಿಂದ ಹೊಡೆದು ಕೊಲೆಮಾಡಿರುವ ಘಟನೆ ನಡೆದಿದೆ.
ಕೂಲಿ ಕಾರ್ಮಿಕ ನಾರಾಯಣ ಪರಶುರಾಮ ಮರಾಠಿ (51) ಮೃತರು. ಹರೀಶ ನಾರಾಯಣ ಮರಾಠಿ ಆರೋಪಿ.
ಅಂಗನವಾಡಿ ಕಾರ್ಯಕರ್ತೆಯಾಗಿರುವ ಮೃತನ ಮಗಳು ತಾರಾ ನಾರಾಯಣ ಮರಾಠಿ ಠಾಣೆಯಲ್ಲಿ ದೂರು ದಾಖಲಿಸಿದ್ದು,`ನನ್ನ ತಂದೆ-ತಾಯಿಗೆ ನಾನು ಮತ್ತು ಅಣ್ಣ ಇಬ್ಬರು ಮಕ್ಕಳು. ನಾವೆಲ್ಲರೂ ಒಂದೇ ಮನೆಯಲ್ಲಿ ವಾಸವಿದ್ದೇವೆ. ಅಣ್ಣನ ಹೆಂಡತಿಗೂ ನನಗೂ ಆಗಿಬರುತ್ತಿರಲಿಲ್ಲ. ಕಾರಣ ಆಗಾಗ ನನಗೆ ಅಣ್ಣ ಹೊಡೆದು-ಬಡಿದು ಮಾಡುತ್ತಿದ್ದ. ಶನಿವಾರ ಅಣ್ಣನ ಹೆಂಡತಿ ಮನೆಯನ್ನು ಸ್ವಚ್ಛಮಾಡುತ್ತಿದ್ದಳು. ನನಗೆ ಮನೆಯೊಳಗೆ ಬಿಡಲಿಲ್ಲ. ನಂತರ ಮಾತಿಗೆ ಮಾತು ಬೆಳೆದಿತ್ತು. ನಂತರ ಆತ ನನಗೆ ಹೊಡೆದ. ಅಪ್ಪ ತೋಟದಿಂದ ಮನೆಗೆ ಬಂದಾಗ ನಡೆದ ಎಲ್ಲ ಘಟನೆಯನ್ನು ಅತನಿಗೆ ತಿಳಿಸಿದೆ. ಆಗ ಅಪ್ಪ ನಾನು ದೂರು ಕೊಟ್ಟು ಬರುತ್ತೇನೆ ಎಂದ. ಆಗ ಅಣ್ಣ ಹರೀಶ ನನಗೂ ಸಾಕಾಗಿ ಹೋಗಿದೆ. ಇವತ್ತು ನಿನಗೆ ಕೊಂದೇ ಬಿಡ್ತೇನೆ ಎನ್ನುತ್ತಾ ಬಲಕಿವಿಯ ಹತ್ತಿರ ಕೊಡಲಿಯಿಂದ ಹೊಡೆದ. ಅಪ್ಪ ಕೆಳಗೆ ಬಿದ್ದ. ಅಣ್ಣ ಓಡಿಹೋದ. ಅಪ್ಪನನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು' ಎಂದು ತಿಳಿಸಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.