
ಡಿಜಿಟೂರ್ ಆ್ಯಪ್‌ನಲ್ಲಿ ಸ್ಮಾರಕಗಳ ನಿರ್ದಿಷ್ಟ ಜಾಗವನ್ನೇ ಗುರುತಿಸಿ ಅದರ ಮಹತ್ವ ವಿವರಿಸುವ ಬಗೆ
ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿಯ ಆನಂದ ಬಾಬು ಮತ್ತು ಅವರ ತಂಡ ‘ಡಿಜಿಟೂರ್’ (DigiTour) ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಇದರಲ್ಲಿ ಹಂಪಿಯ ಸ್ಮಾರಕಗಳು ಸೇರಿದಂತೆ ದೇಶದ 100ಕ್ಕೂ ಹೆಚ್ಚು ಸ್ಮಾರಕಗಳ ಸಮಗ್ರ ಮಾಹಿತಿ ಸಿಗುತ್ತದೆ.
ಆನಂದ ಬಾಬು, ಹರೀಶ್, ಪ್ರದೀಪ್, ಶಶಿಧರ ಮತ್ತು ರಾಜೇಶ್ ಅವರ ತಂಡವು 10 ವರ್ಷಗಳ ಸತತ ಪ್ರಯತ್ನದಿಂದ ರೂಪಿಸಿರುವ ಆ್ಯಪ್‌ನಲ್ಲಿ ಪ್ರವಾಸಿ ತಾಣಗಳನ್ನು ಆಕರ್ಷಕವಾಗಿ ಬಿಂಬಿಸಲು ಡ್ರೋನ್ ಕ್ಯಾಮೆರಾ ಹಾಗೂ ಅಜಂತಾ ಗುಹೆಗಳ ಚಿತ್ರಣವನ್ನು ಕಟ್ಟಿಕೊಡಲು ‘ಎ.ಐ’ ತಂತ್ರಜ್ಞಾನ ಬಳಸಲಾಗಿದೆ.
‘ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪ್ರಮುಖ ಸ್ಮಾರಕಗಳ ಮಾಹಿತಿ ಈ ಆ್ಯಪ್‌ನಲ್ಲಿದೆ. ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿದೆ. ಕ್ಯುಆರ್ ಕೋಡ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಸಕ್ತರಿಗೆ ಉಚಿತವಾಗಿ ವಿವಿಧ ಸ್ಮಾರಕಗಳ ಬಗ್ಗೆ ಮಾಹಿತಿ ಲಭ್ಯವಿದೆ. ಈ ಆ್ಯಪ್‌ನ ವೆಚ್ಚವನ್ನು ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಭರಿಸುತ್ತಿದೆ’ ಎಂದು ಆನಂದ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಸ್ಮಾರಕಗಳ ಬಗ್ಗೆ ಮೊದಲಿನಿಂದಲೂ ಕುತೂಹಲ ಇತ್ತು. ಜನರಿಗೆ ಉಪಯೋಗ ಆಗುವ ಕೆಲಸ ಮಾಡಲು 2016ರಲ್ಲಿ ಸ್ಟಾರ್ಟ್‌ಅಪ್ ಕಂಪನಿ ಆರಂಭಿಸಿದ್ದು, ಸರ್ಕಾರದ ನೆರವು ಪಡೆದೆ. ಅದು ಈಗ ಫಲ ಕೊಟ್ಟಿದೆ’ ಎಂದರು.
ಈ ಆ್ಯಪ್‌ನಲ್ಲಿ ಸದ್ಯ ಕನ್ನಡ, ಇಂಗ್ಲಿಷ್ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಸ್ಮಾರಕಗಳ ವಿವರಣೆಯನ್ನು ಆಲಿಸಹುದು. ಕೆಲ ವಿದೇಶಿ ಭಾಷೆಗಳ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
100 ಸ್ಮಾರಕಗಳ ಮಾಹಿತಿ ಸಿದ್ಧವಿದ್ದು ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅನುಮತಿ ಪಡೆದ ಬಳಿಕ ಆ್ಯಪ್‌ನಲ್ಲಿ ಸೇರಿಸಲಾಗುವುದು
–ಆನಂದ ಬಾಬು ‘ಡಿಜಿಟೂರ್’ ಆ್ಯಪ್ ನಿರ್ಮಾತೃ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.