ADVERTISEMENT

ಕೂಡ್ಲಿಗಿಯಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ನಟ ಸುದೀಪ್ ರೋಡ್ ಶೋ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 9:59 IST
Last Updated 27 ಏಪ್ರಿಲ್ 2023, 9:59 IST
ಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಚಿತ್ರನಟ ಸುದೀಪ್ ಅವರು ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿದರು.
ಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಚಿತ್ರನಟ ಸುದೀಪ್ ಅವರು ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿದರು.   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಚಿತ್ರನಟ ಸುದೀಪ್ ಅವರು ಪಟ್ಟಣದಲ್ಲಿ ಗುರುವಾರ ರೋಡ್ ಶೋ ನಡೆಸಿದರು.

ಸಂಡೂರಿನಿಂದ ಕಾರಿನಲ್ಲಿ ಬಂದ ಸುದೀಪ್, ಪಟ್ಟಣದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ತೆರೆದ ವಾಹನ ಏರಿ ನೆರಿದಿದ್ದ ಜನರತ್ತ ಕೈ ಮಾಡುತ್ತ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಅವರ ಕೈ ಮೇಲೆತ್ತಿ ಜನರಿಗೆ ತೋರಿಸಿ ಮತಯಾಚಿಸಿದರು. ಜನ ಕಿಚ್ಚ ಕಿಚ್ಚ ಎಂಬ ಕೂಗಿದರು. ಕೊತ್ತಲಾಂಜನೇಯ ಸ್ವಾಮಿ ದೇವಸ್ಥಾನದ ಎದುರಿನಿಂದ ಮದಕರಿ ನಾಯಕ ವೃತ್ತದ ವರೆಗೆ ರೋಡ್‌ ಶೋ ನಡೆಸಿದರು. ಸುದೀಪ್ ಮಾತಾಡಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅವರು ರೋಡ್‌ ಶೋ ನಂತರ ಕಾರು ಹತ್ತಿ ನಿರ್ಗಮಿಸಿದ್ದರಿಂದ ಜನ ಸಪ್ಪೆ ಮೊರೆ ಹಾಕಿ ತೆರಳಿದರು.

ಬಿಜೆಪಿ ಚುನಾವಣಾ ಉಸ್ತುವಾರಿ ವೀರೇಶ್ ಬಾತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ಮಂಡಲ ಅಧ್ಯಕ್ಷ ಕೆ. ಚನ್ನಪ್ಪ,ಕಾರ್ಯದರ್ಶಿ ಪಿ. ಮಂಜುನಾಥ, ಮುಖಂಡರಾದ ಗುಳಿಗಿ ವೀರೇಂದ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.