
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ‘ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಬೆಂಗಳೂರಿನಲ್ಲಿ ಅಸಭ್ಯವಾಗಿ ಕೈಬೆರಳು ತೋರಿಸಿದ್ದು ಸ್ನೇಹಿತನಿಗೆ ಹೊರತು ಜನರಿಗಲ್ಲ’ ಎಂದು ನಟ ಝೈದ್ ಖಾನ್ ಶುಕ್ರವಾರ ಇಲ್ಲಿ ಹೇಳಿದರು.
‘ಕಲ್ಟ್’ ಚಲನಚಿತ್ರದ ಪ್ರಚಾರಕ್ಕಾಗಿ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿ, ‘ಜನರಿಗೆ ಹಾಗೆ ಕೈ ತೋರಿಸಿದರೆ ಖಂಡಿತ ಆರ್ಯನ್ ಕೂಡಾ ಸುಮ್ಮನಿರಲ್ಲ. ಜನಜಂಗುಳಿ ನಿವಾರಿಸಲು ಕಳುಹಿಸಿದ್ದ ಸ್ನೇಹಿತ ಇನ್ನೂ ಬಂದಿರಲಿಲ್ಲ. ಬಾಲ್ಕನಿಯಲ್ಲಿ ನಿಂತ ವೇಳೆ ಆತ ಕಂಡಾಗ, ಕೈಬೆರಳು ತೋರಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.