ADVERTISEMENT

ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹೊಸಪೇಟೆಯಲ್ಲಿ ಬಜರಂಗದಳದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 10:05 IST
Last Updated 16 ಜೂನ್ 2022, 10:05 IST
ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹೊಸಪೇಟೆಯಲ್ಲಿ ಬಜರಂಗದಳದಿಂದ ಪ್ರತಿಭಟನೆ
ಹಿಂದೂಗಳ ಮೇಲಿನ ದಾಳಿ ಖಂಡಿಸಿ ಹೊಸಪೇಟೆಯಲ್ಲಿ ಬಜರಂಗದಳದಿಂದ ಪ್ರತಿಭಟನೆ   

ಹೊಸಪೇಟೆ (ವಿಜಯನಗರ): ದೇಶದಾದ್ಯಂತ ನಡೆಯುತ್ತಿದೆ ಎನ್ನಲಾದ ಮತಾಂಧತೆ ಹಾಗೂ ಹಿಂದೂಗಳ ಮೇಲಿನ ವ್ಯವಸ್ಥಿತ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಗುರುವಾರ ನಗರದ ತಹಶೀಲ್ದಾರ್‌ ಕಚೇರಿ ಎದುರು ಧರಣಿ ನಡೆಸಿದರು.

ಮುಖ್ಯಮಂತ್ರಿ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿಶ್ವಜೀತ್‌ ಮೆಹ್ತಾ ಅವರಿಗೆ ಸಲ್ಲಿಸಿದರು.ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ಬಟ್ಟೆಪಾಟಿ ಮಾತನಾಡಿ, ಇತ್ತೀಚೆಗೆ ದೇಶದಲ್ಲಿ ಹಿಂದೂಗಳ ಮೇಲೆ ವ್ಯವಸ್ಥಿತ ದಾಳಿ ನಡೆಸಲಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಕೂಡ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಖಂಡನೀಯ ಎಂದರು.

ನುಪೂರ್ ಶರ್ಮಾ ಹಾಗೂ ನವೀನ್ ಶರ್ಮಾ ಹೇಳಿಕೆಯ ನಂತರ ಹಲವು ಕಡೆಗಳಲ್ಲಿ ಶುಕ್ರವಾರದ ಪ್ರಾರ್ಥನೆ ನಂತರ ಹಿಂಸಾಚಾರಗಳು ನಡೆದಿವೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯಲಕ್ಷ್ಮಿ ಹಿರೇಮಠ, ತಿಪ್ಪೆಸ್ವಾಮಿ, ಸುಧೀಂದ್ರ, ಆನಂದ ಕೃಷ್ಣ, ಚಂದ್ರಕಾಂತ ಕಾಮತ್ ಇತರರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.