ಕೂಡ್ಲಿಗಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಕರಡಿಯೊಂದು ಮರವೇರಿ ಕುಳಿತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಬೆಳಗಿನ ಜಾವ ಗ್ರಾಮದತ್ತ ಕರಡಿ ಬಂದಿದ್ದು, ಬೆಳಕು ಹರಿಯುತ್ತಿದ್ದಂತೆ ಮಾರಮ್ಮಕಟ್ಟೆಯ ಬಳಿ ಮೀನಕರೆ ಮಾರಪ್ಪ ಎನ್ನುವವರ ಕಣದಲ್ಲಿ ಮರವೇರಿ ಕುಳಿತಿದೆ. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತಂದರು.
ಕರಡಿ ಸೆರೆ: ಅರಿವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಸೆರೆಹಿಡಿಯಲಾಗಿದ್ದು, ಅದನ್ನು ಸದ್ಯ ಕಮಲಾಪುರದ ಮೃಗಾಲಯದಕ್ಕೆ ಸಾಗಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.