ADVERTISEMENT

ಹೊಸಪೇಟೆ | ಜಂಬುನಾಥ ದೇವಸ್ಥಾನದಲ್ಲಿ ಕರಡಿ ಕಾಟ

ಅರ್ಚಕರಿಗೆ ಜೀವಭಯ–ಮೆಟ್ಟಿಲು ಹತ್ತಿ ಹೋಗುವ ಭಕ್ತರಿಗೂ ಆತಂಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 3:53 IST
Last Updated 29 ಜುಲೈ 2025, 3:53 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಹೊಸಪೇಟೆ (ವಿಜಯನಗರ): ನಗರದ ಹೊರವಲಯದಲ್ಲಿರುವ ಜಂಬುನಾಥ ಗುಡ್ಡದಲ್ಲಿರುವ ಜಂಬುನಾಥ ದೇವಸ್ಥಾನದ ಆವರಣದಲ್ಲಿ ಕಳೆದ ನಾಲ್ಕು ದಿನಗಳಿಂದ ಕರಡಿಯೊಂದು ಸುತ್ತು ಹಾಕುತ್ತಲೇ ಇದ್ದು, ಅರ್ಚಕರು, ಭಕ್ತರು ಆತಂಕಗೊಂಡಿದ್ದಾರೆ.

‘ಒಂದು ಕರಡಿ ರಾತ್ರಿ 8 ಗಂಟೆ ವೇಳೆಗೆ ದೇವಸ್ಥಾನದ ಬಳಿ ಬಂತು, ನಾವೆಲ್ಲ ಗಲಾಟೆ ಮಾಡಿದ್ದರಿಂದ ಓಡಿ ಹೋಯಿತು. ಮರುದಿನವೂ ಮತ್ತೆ ದೇವಸ್ಥಾನಕ್ಕೆ ಬಂದಿದೆ. ಗರ್ಭಗುಡಿಯ ಒಳಗೂ ಅದು ಹೋಗಿ ಬಳಿಕ ಕಾಡಿನತ್ತ ಹೊರಟು ಹೋಗಿದೆ. ನಾವೆಲ್ಲ ಬಹಳ ಆತಂಕಗೊಂಡಿದ್ದೇವೆ’ ಎಂದು ಅರ್ಚಕ ಆನಂದಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳೆದ ನಾಲ್ಕು ದಿನಗಳಿಂದಲೂ ಇಲ್ಲಿ ಇದೇ ಕರಡಿ ಕಾಣಿಸಿಕೊಳ್ಳುತ್ತಲೇ ಇದೆ. ನಾವು ಸುಮಾರು 20 ಮಂದಿ ಅರ್ಚಕರ ಕುಟುಂಬದವರು ಇಲ್ಲಿದ್ದೇವೆ. ನಮ್ಮ ಜೀವ ಮಾತ್ರವಲ್ಲ, ಸುಮಾರು 400 ಮೆಟ್ಟಿಲು ಹತ್ತಿ ಬರುವ ಭಕ್ತರ ಬಗ್ಗೆ ನಮಗೆ ಆತಂಕ ಇದೆ. ಅರಣ್ಯ ಇಲಾಖೆ ತಕ್ಷಣ ಈ ಕರಡಿಯನ್ನು ಈ ಭಾಗದಿಂದ ಓಡಿಸುವ ಅಥವಾ ಸೆರೆಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ADVERTISEMENT

ಈ ಬಗ್ಗೆ ಡಿಸಿಎಫ್‌ ಹಾಗೂ ಇತರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.