ADVERTISEMENT

ಹಂಪಿ: ಹಾಲುಣಿಸುವ ಕೊಠಡಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 13:39 IST
Last Updated 9 ಮಾರ್ಚ್ 2024, 13:39 IST
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಮಕ್ಕಳಿಗೆ ಹಾಲುಣಿಸಲು ನಿಗದಿಯಾದ ಸ್ಥಳ 
ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಮಕ್ಕಳಿಗೆ ಹಾಲುಣಿಸಲು ನಿಗದಿಯಾದ ಸ್ಥಳ    

ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಸಮೀಪ ಮಕ್ಕಳಿಗೆ ಎದೆಹಾಲು ಉಣಿಸಲು ಕೊಠಡಿ ಸಿದ್ಧವಾಗಿದ್ದು, ಶನಿವಾರದಿಂದಲೇ ಕಾರ್ಯಾರಂಭ ಮಾಡಿದೆ.

ದೇವಸ್ಥಾನದ ದಕ್ಷಿಣ ದ್ವಾರದ ಬಳಿ ಈ ಹಿಂದೆ ಇಟ್ಟ ಟಿಕೆಟ್ ಕೌಂಟರ್ ಸ್ಥಳವನ್ನೇ ಇದೀಗ ಎದೆಹಾಲು ಉಣಿಸುವ ಕೊಠಡಿಯನ್ನಾಗಿ ಪರಿವರ್ತಿಸಲಾಗಿದ್ದು, ತಾಯಂದಿರಿಗೆ ಕುಳಿತುಳ್ಳಲು ಕುರ್ಚಿ, ಫ್ಯಾನ್‌ ವ್ಯವಸ್ಥೆ ಮಾಡಲಾಗಿದೆ.

ವಿಜಯ ವಿಠ್ಠಲ ದೇವಸ್ಥಾನಕ್ಕೆ ಪ್ರವಾಸಕ್ಕೆ ಬರುವ ತಾಯಂದಿರು ಮಕ್ಕಳಿಗೆ ಹಾಲುಣಿಸಲು ಪಡುವ ಕಷ್ಟದ ಕುರಿತು ‘ಪ್ರಜಾವಾಣಿ’ ಫೆಬ್ರುವರಿ 26ರಂದು ಚಿತ್ರ ಸಹಿತ ವರದಿ ಪ್ರಕಟಿಸಿತ್ತು. ಅದಕ್ಕೆ ಸ್ಪಂದಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಈ ಸೌಲಭ್ಯ ಮಾಡಿಕೊಟ್ಟಿದೆ.

ADVERTISEMENT

ಹಂಪಿ ವಿರೂಪಾಕ್ಷ ದೇವಸ್ಥಾನ ಆವರಣ ಮತ್ತು ಮಹಾನವಮಿ ದಿಬ್ಬ ಸಮೀಪವೂ ಇಂತಹ ವ್ಯವಸ್ಥೆ ಆಗಬೇಕು ಎಂದು ಹಲವು ಪ್ರವಾಸಿಗರು ಒತ್ತಾಯಿಸಿದ್ದಾರೆ.

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಮಕ್ಕಳಿಗೆ ಹಾಲುಣಿಸಲು ಸಿದ್ಧವಾಗಿರುವ ಕೊಠಡಿಯ ಒಳಭಾಗದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.