ಹೊಸಪೇಟೆ: ನವೆಂಬರ್ ಕ್ರಾಂತಿಯ ಕಡೆಗಷ್ಟೇ ಸಂಪೂರ್ಣ ಲಕ್ಷ್ಯ ಹೊಂದಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ ತುಂಗಭದ್ರಾ ಅಣೆಕಟ್ಟೆಯನ್ನು ಮರೆತು ಬಿಟ್ಟಿತು, ಅದರಿಂದ ಅಮೂಲ್ಯ 188 ಟಿಎಂಸಿ ನೀರು ಆಂಧ್ರದ ಪಾಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಸೋಮವಾರ ಇಲ್ಲಿ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸರ್ಕಾರದ ನಿರ್ಲಕ್ಷ್ಯ ದಿಂದ ಲಕ್ಷಾಂತರ ರೈತರ ಎರಡನೇ ಬೆಳೆಗೆ ನೀರು ಸಿಗದಂತಾಗಿದೆ ಎಂದರು.
ಕಾವೇರಿ ನೀರಿನಂತೆ ತುಂಗಭದ್ರಾ ನೀರಿನ ಬಗ್ಗೆ ಸಹ ಕಾಳಜಿ ಇದೆ, ರೈತರ ಹಿತ ಕಾಯಲು ಬದ್ಧ, ನವೆಂಬರ್‌ನಿಂದ ಗೇಟ್ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.