
ಹೊಸಪೇಟೆ: ನಗರದ ಎಂ.ಪಿ.ಪ್ರಕಾಶನಗರದ ಶ್ರೀ ಮಾರ್ಕಂಡೇಶ್ವರ ಶಾಲೆಯಲ್ಲಿ ಸೋಮವಾರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆದಿದ್ದು, 178 ಮಂದಿ ಪಾಲ್ಗೊಂಡಿದ್ದರು. 50ಕ್ಕೂ ಅಧಿಕ ಮಂದಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡರು.
ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಅಧ್ಯಕ್ಷ ಎಚ್.ಎನ್.ಎಫ್.ಮೊಹಮ್ಮದ್ ಇಮಾಂ ನಿಯಾಜಿ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಎಎಸ್‌ಪಿ ಜಿ.ಮಂಜುನಾಥ್ ಮುಖ್ಯ ಅತಿಥಿಯಾಗಿದ್ದರು.
ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ.ಶಿವಾನಂದ, ಸರ್ಕಲ್ ಇನ್‌ಸ್ಪೆಕ್ಟರ್ ಗುರುರಾಜ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅಯ್ಯಪ್ಪ, ಮಾರ್ಕಂಡೇಶ್ವರ ಶಾಲೆಯ ಅಧ್ಯಕ್ಷ ಬಿ.ಜಯರಾಮ್, ನಿವೃತ್ತ ಎನ್‌ಸಿಸಿ ವಿಭಾಗಾಧಿಕಾರಿ ಗಿರೀಶ್, ಜಿಲ್ಲಾ ಪ್ರೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಪ್ಪ, ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಇತರರು ಇದ್ದರು.
ಫಲಿತಾಂಶ– ರಾಜ್ಯಮಟ್ಟಕ್ಕೆ ಆಯ್ಕೆಯಾದವರು: 8ರಿಂದ 12ನೇ ತರಗತಿ ವಿಭಾಗ: ಕನ್ನಡ ಭಾಷಣ– ಎಸ್.ಎಂ.ಉಷಾ, ಶ್ರೀ.ಬಿ.ಕೆ.ವಿ ಪ್ರೌಢಶಾಲೆ ನಿಂಬಳಗೆರೆ. ಇಂಗ್ಲಿಷ್ ಭಾಷಣ: ಸಿರಿ ಕೆ.ಪಿ.,ಎಂಪಿಪಿ ಶಾಲೆ, ಹಗರಿಬೊಮ್ಮನಹಳ್ಳಿ. ಹಿಂದಿ ಭಾಷಣ: ಫರ್ಹಾನ್ ಖಾನ್, ಆದರ್ಶ ವಿದ್ಯಾಲಯ ಅನಂತನಹಳ್ಳಿ. ಉರ್ದು ಭಾಷಣ: ಮೋಹಿನ್ ಎನ್., ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಕಮಲಾಪುರ.
ಧಾರ್ಮಿಕ ಪಠಣ ಸಂಸ್ಕೃತ: ಬೃಂದಶ್ರೀ, ಪರಿವರ್ತನ ಶಾಲೆ, ಕಾಯಕದಹಳ್ಳಿ. ಧಾರ್ಮಿಕ ಪಠಣ ಅರೇಬಿಕ್: ಆರ್.ಡಿ.ಫರ್ಹಾನ್, ವಿವಿಎಸ್ ಪ್ರೌಢಶಾಲೆ, ಹರಪನಹಳ್ಳಿ.
ಜಾನಪದ ಗೀತೆ: ಅಪೂರ್ವ ಜಿ., ಮೊರಾರ್ಜಿ ಶಾಲೆ ಕಾಳಘಟ್ಟ. ಭಾವಗೀತೆ: ಎ.ಎನ್.ಜ್ಯೊತಿ, ಸರ್ಕಾರಿ ಹಿ.ಪ್ರಾ.ಶಾಲೆ ಉಜ್ಜಿನಿ. ಭರತನಾಟ್ಯ: ಪ್ರೇರಣಾ ಬಿ.ಎ., ಗುರುದೇವ ಶಾಲೆ ಕೊಟ್ಟೂರು. ಪ್ರಬಂಧ ರಚನೆ: ಲಾವಣ್ಯ, ಸರ್ಕಾರಿ ಪ್ರೌಢಶಾಲೆ ಹಾರಕನಾಳು. ಚಿತ್ರಕಲೆ: ಎಂ.ಸಿಂಚನ, ಆದರ್ಶ ವಿದ್ಯಾಲಯ. ಮಿಮಿಕ್ರಿ: ಸುಮಾ ಮಾಗಳದ, ಜಿಎಚ್‌ಎಸ್ ನಾಗತಿಬಸಾಪುರ. ಚರ್ಚಾ ಸ್ಪರ್ಧೆ: ಕವನ ಎಚ್., ವಿವಿಎಸ್ ಪ್ರೌಢಶಾಲೆ ಹರಪನಹಳ್ಳಿ. ರಂಗೋಲಿ: ಪ್ರಜ್ವಲ್, ಎಸ್‌ಟಿಬಿಟಿ ನರಸಿಂಹಗಿರಿ, ಗಝಲ್: ಮಲ್ಲಿಕಾ ರೆಹಾನ್, ಜಿಎಸ್‌ಎಸ್ ಹಿರೇಹಡಗಲಿ. ಕವನ/ಕಾವ್ಯ ವಾಚನ: ಶರಣಯ್ಯ ಎಸ್‌ಎಸ್., ಗುರುದೇವ ಶಾಲೆ ಕೊಟ್ಟೂರು. ಆಶುಭಾಷಣ:ಎನ್.ಟಿ.ಶಿರಿಶಾ, ರೋಸ್‌ಬಡ್ ಹೊಸಪೇಟೆ.
ಸಾಮೂಹಿಕ ವಿಭಾಗ: ಜಾನಪದ ನೃತ್ಯ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗರಗ (ಸ್ವಪ್ನಾ, ನಿಂಗಯ್ಯ ಜಿ.ಡಿ., ಡಿ.ಭಾರತಿ, ಕೆ.ಮಾನಸ, ಮಾನಸ ಕೆ., ಎಸ್.ತನುಜಾ). ಕವ್ವಾಲಿ: ಕಿ.ರಾ.ಚೆ.ವ ಶಾಲೆ, ವರಲಹಳ್ಳಿ (ಚಿನ್ನು ಜೆ., ಮೇಘನಾ ಕೆ., ಪೂಜಾ ಡಿ., ಭವಾನಿ ವಿ., ಸಿಂಚನಾ ಎಲ್.,ಸುಮಂಗಲಾ ಎಸ್.).
5ರಿಂದ 7ನೇ ತರಗತಿ ವಿಭಾಗ ಕಂಠಪಾಠ ಕನ್ನಡ: ಭಾವನ ಡಿವೈನ್ ಹಿರಿಯ ಪ್ರಾಥಮಿಕ ಶಾಲೆ ಹಿರೇಹಡಗಲಿ. ಕಂಠಪಾಠ ಇಂಗ್ಲಿಷ್: ಮೈತ್ರಿ ಎಂ.ಎಸ್. ಸ.ಹಿ.ಪ್ರಾ.ಶಾಲೆ ಕುಲುಮಹಟ್ಟಿ ಕೂಡ್ಲಿಗಿ. ಕಂಠಪಾಠ ಹಿಂದಿ: ದಿವ್ಯ ಆರ್. ಕಿ.ರಾ.ಚ.ಶಾಲೆ ವರಕನಹಳ್ಳಿ ಹಡಗಲಿ. ಕಂಠಪಾಠ ಉರ್ದು: ಇಷ್ಪತ್ ಪೂಲ್‌ಬನ್ ಉರ್ದು ಶಾಲೆ ಹೊಸಪೇಟೆ. ಧಾರ್ಮಿಕ ಪಠಣ ಸಂಸ್ಕೃತ: ಅಪ್ರಮೇಯ ಲಹರಿ ಶಾಲೆ ಹೊಸಪೇಟೆ. ಧಾರ್ಮಿಕ ಪಠಣ ಅರೇಬಿಕ್: ಬಿ.ಅಬ್ದುಲ್ ರಜಾಕ್ ಬಿ.ಇ.ಎನ್.ಆರ್.ಶಾಲೆ ಹಂಪಸಾಗರ. ದೇಶಭಕ್ತಿಗೀತೆ: ವಿವೇಕ್ ಎಸ್. ಕಾಳಿದಾಸ ಶಾಲೆ ಹೊಸಳ್ಳಿ ಕೂಡ್ಲಿಗಿ. ಪ್ರಬಂಧ ರಚನೆ: ಕೆ.ಎಸ್.ವಿಜಯಲಕ್ಷ್ಮಿ ಸ.ಹಿ.ಪ್ರಾ.ಶಾಲೆ ಸಿಂಗ್ರಿಹಳ್ಳಿ ಹರಪನಹಳ್ಳಿ. ಕಥೆ ಹೇಳುವುದು: ಚೇತನಾ ಟಿ. ಸ.ಹಿ.ಪ್ರಾ.ಶಾಲೆ ಕೆ.ಕೆ.ತಾಂಡ ಹಗರಿಬೊಮ್ಮನಹಳ್ಳಿ. ಚಿತ್ರಕಲೆ: ಸಿದ್ಧಾರ್ಥಪ್ರಸಿದ್ಧಿ ಶಾಲೆ ಹಗರಿಬೊಮ್ಮನಹಳ್ಳಿ. ಅಭಿನಯಗೀತೆ: ರೇಖಾ ಎಂ. ಸ.ಹಿ.ಪ್ರಾ.ಶಾಲೆ ದೇವರತಿಮ್ಮಲಾಪುರ ಹರಪನಹಳ್ಳಿ. ಕ್ಲೇ ಮಾಡಲಿಂಗ್: ಶ್ರೀನಿವಾಸ ಸ.ಹಿ.ಪ್ರಾ.ಶಾಲೆ ಇಂಗಳಗಿ ಹೊಸಪೇಟೆ. ಭಕ್ತಿಗೀತೆ: ಶ್ವೇತಾ ಸ.ಹಿ.ಪ್ರಾ.ಶಾಲೆ ಕಾಂತಬೆನ್ನೂರು ಹಡಗಲಿ. ಆಶುಭಾಷಣ: ಮಾನಸ ಜವಳಿ ಸ.ಹಿ.ಪ್ರಾ.ಶಾಲೆ ಚಿಟಗೇರಿ ಹರಪನಹಳ್ಳಿ. ಕವನ/ ಪದ್ಯವಾಚನ: ನಯನ ಸ.ಹಿ.ಪ್ರಾ.ಶಾಲೆ ಕಾಕುಬಾಳು ಹೊಸಪೇಟೆ. ಮಿಮಿಕ್ರಿ: ಗೌತಮ್ ಪಿಎಂಶ್ರೀ ಕಾರಿಗನೂರು ಹೊಸಪೇಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.