ADVERTISEMENT

ಡಿಕೆಶಿ ಯಾವತ್ತೂ ಒಕ್ಕಲಿಗ ನಾಯಕ ಆಗಲಿಲ್ಲ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:46 IST
Last Updated 27 ನವೆಂಬರ್ 2025, 4:46 IST
ಆರ್‌.ಅಶೋಕ
ಆರ್‌.ಅಶೋಕ   

ಹೊಸಪೇಟೆ (ವಿಜಯನಗರ): ‘ಡಿ.ಕೆ.ಶಿವಕುಮಾರ್ ಯಾವತ್ತು ಒಕ್ಕಲಿಗ ನಾಯಕರಾಗಿರಲಿಲ್ಲ. ಕುಕ್ಕರ್ ಬಾಂಬ್‌ನವರನ್ನು ಅವರು ಬ್ರದರ್ ಎಂದು ಕರೆದವರು. ಅಂಥವರನ್ನು ನಾವು ಒಕ್ಕಲಿಗ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಬುಧವಾರ ಇಲ್ಲಿ ಹೇಳಿದರು.  

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಂದುವರೆಯುವರೇ ಅಥವಾ ಡಿ.ಕೆ.ಶಿವಕುಮಾರ್ ಸಿ.ಎಂ ಆಗುವರೇ ಎಂದು ಸ್ಪಷ್ಟಪಡಿಸಬೇಕು. ದಲಿತ ನಾಯಕರಿಗೆ ಅವಕಾಶ ಇದೆಯೇ ಎಂಬುದನ್ನು ಹೇಳಬೇಕು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಸಿ.ಎಂ ಯಾರು ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಘೋಷಿಸಲಿ. ಇಲ್ಲದಿದ್ದರೆ, ಬೆಳಗಾವಿಯಲ್ಲಿ ನಡೆಯುವ ವಿಧಾಮಂಡಲ ಚಳಿಗಾಲ ಅಧಿವೇಶನವು ಮುಖ್ಯಮಂತ್ರಿ ಯಾರು ಎಂಬ ಚರ್ಚೆಯಲ್ಲೇ ವ್ಯರ್ಥವಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.