ADVERTISEMENT

ಹರಪನಹಳ್ಳಿ: 12 ಪಾತ್ರಗಳಲ್ಲಿ ರಂಜಿಸಿದ ಇಬ್ಬರು ಕಲಾವಿದರು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 14:00 IST
Last Updated 4 ಡಿಸೆಂಬರ್ 2023, 14:00 IST
ಹರಪನಹಳ್ಳಿ ಪಟ್ಟಣದ ಕಾಶಿಮಠ ಆವರಣದಲ್ಲಿ ‘ಚತುರನ ಚಾತುರ್ಯ’ ನಾಟಕದ ದೃಶ್ಯದಲ್ಲಿ ಅರುಣ್ ಕುಮಾರ ಮತ್ತು ಚೇತನ್
ಹರಪನಹಳ್ಳಿ ಪಟ್ಟಣದ ಕಾಶಿಮಠ ಆವರಣದಲ್ಲಿ ‘ಚತುರನ ಚಾತುರ್ಯ’ ನಾಟಕದ ದೃಶ್ಯದಲ್ಲಿ ಅರುಣ್ ಕುಮಾರ ಮತ್ತು ಚೇತನ್   

ಹರಪನಹಳ್ಳಿ: ಧೈರ್ಯವನ್ನು ಪ್ರತಿಬಿಂಬಿಸುವ ‘ಚತುರನ ಚಾತುರ್ಯ’ ನಾಟಕದಲ್ಲಿರುವ ಹಲವು ಪಾತ್ರಗಳನ್ನು ಇಬ್ಬರೇ ಯುವ ಕಲಾವಿದರು ಅಭಿನಯಿಸುವ ಮೂಲಕ ಗಮನ ಸೆಳೆದರು.

ಪಟ್ಟಣದ ಕಾಶಿಮಠದ ಆವರಣದಲ್ಲಿ ಕತ್ತಲು ಬೆಳಕಿನ ರಂಗಪ್ರಯೋಗ ತಂಡದಿಂದ ನಾಟಕ ಪ್ರದರ್ಶನ ಭಾನುವಾರ ರಾತ್ರಿ ಜರುಗಿತು.

ಯಾದವ ಕವಿ ರಚಿತ ಚತುರನ ಚಾತುರ್ಯ ನಾಟಕದಲ್ಲಿ ಯುವ ರಂಗಕರ್ಮಿ ಅರುಣ್ ಕುಮಾರ ಮೇದಾರ ಮತ್ತು ರಂಗಕರ್ಮಿ ಚೇತನ್ ಅವರು ವಿವಿಧ ಪಾತ್ರಗಳಿಗೆ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಗೆದ್ದರು. ಕ್ಷೌರಿಕ, ಬ್ರಾಹ್ಮಣ, ಹುಲಿ ಮತ್ತು ನರಿ ದೃಶ್ಯಗಳು ತೆರೆ ಮೇಲೆ ಬಂದಾಗ ರಂಗಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ADVERTISEMENT

ನಾಪಿತ (ಕ್ಷೌರಿಕ), ಸೂತ್ರಧಾರ, ಹುಲಿ, ನರಿ ಪಾತ್ರಗಳಲ್ಲಿ ಮೇದಾರ ಅರುಣ್ ಕುಮಾರ, ಬ್ರಾಹ್ಮಣ, ಸೂತ್ರಧಾರ, ಹುಲಿ ಪಾತ್ರಗಳಿಗೆ ಕಾರ್ಮಿಕ್ ಕಲ್ಲುಕುಟಿಕರ್ ಜೀವ ತುಂಬಿದ್ದರು. ಸಂಗೀತ ಮತ್ತು ಬೆಳಕಿನ ನಿರ್ವಹಣೆ ಕಲಾವಿದೆ ಶ್ಯಾಮಲಾ ಅಚ್ಚುಕಟ್ಟಾಗಿ ನಿರ್ವಹಿಸಿದರು. ರಂಗದ ಮೇಲೆ ಇಬ್ಬರೇ ಯುವಕರು 12 ಪಾತ್ರಗಳಲ್ಲಿ ಅಭಿನಯಿಸಿದ್ದಕ್ಕೆ ನೆರೆದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕಲಾವಿದ ಪರಶುರಾಮ್, ‘ಕಲಾವಿದರಿಗೆ ತನು ಮನ ಧನ ಸಹಾಯದ ಮೂಲಕ ಪ್ರೋತ್ಸಾಹಿಸಬೇಕು. ಯುವ ಕಲಾವಿದರು ರಂಗಭೂಮಿ ಕಲೆಯತ್ತ ಬರುವಂತಾಗಬೇಕು’ ಎಂದು ಹೇಳಿದರು.

ಹರಪನಹಳ್ಳಿ ಪಟ್ಟಣದ ಕಾಶಿಮಠ ಆವರಣದಲ್ಲಿ ‘ಚತುರನ ಚಾತುರ್ಯ’ ನಾಟಕದ ದೃಶ್ಯದಲ್ಲಿ ಅರುಣ್ ಕುಮಾರ ಮತ್ತು ಚೇತನ್

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆರುಂಡಿ ಸುವರ್ಣ ನಾಗರಾಜ್, ಶಿಕ್ಷಕ ಜಯಮಾಲತೇಶ್, ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಣ್ಣ ಮೋರಗೇರಿ, ಪ್ರಾಚಾರ್ಯ ಎಚ್.ಮಲ್ಲಿಕಾರ್ಜುನ್, ರವೀಂದ್ರ ಅಧಿಕಾರ, ಚನ್ನಪ್ಪ ಮಾತನಾಡಿದರು. ಕಾಶಿನಾಥ್, ಬಾಗಳಿ ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.