ADVERTISEMENT

ಸಾಲ, ಕೃಷಿಯಲ್ಲಿ ನಷ್ಟ: ಹಗರಿಬೊಮ್ಮನಹಳ್ಳಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 10:46 IST
Last Updated 8 ಜನವರಿ 2026, 10:46 IST
<div class="paragraphs"><p>ರೈತ ನಾಗರೆಡ್ಡಿ</p></div>

ರೈತ ನಾಗರೆಡ್ಡಿ

   

ಹಗರಿಬೊಮ್ಮನಹಳ್ಳಿ: ಸಾಲಬಾಧೆಯಿಂದ ಹಾಗೂ ಕೃಷಿಯಲ್ಲಿ ನಷ್ಟ ಹೊಂದಿದ್ದರಿಂದ ಮನನೊಂದು ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಬನ್ನಿಗೋಳ ಗ್ರಾಮದಲ್ಲಿ ಗುರುವಾರ ನಡೆದಿದೆ.

ರೈತ ನಾಗರೆಡ್ಡಿ (36) ಬುಧವಾರ ರಾತ್ರಿ ಕೀಟನಾಶಕ ಸೇವಿಸಿದ್ದರು. ಅವರನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ ಎಂದು‌ ತಂಬ್ರಹಳ್ಳಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಾಗರೆಡ್ಡಿ ಅವರ ಪತ್ನಿ ಪುಷ್ಪಾವತಿ ಅವರ ಹೆಸರಿನಲ್ಲಿ ಜಮೀನಿದ್ದು, ತಂಬ್ರಹಳ್ಳಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಪತ್ನಿ ಸಾಲ ಮಾಡಿದ್ದರು. ನಾಗಿರೆಡ್ಡಿ ಖಾಸಗಿ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು.  ರೇಷ್ಮೆ ಕೃಷಿಯಲ್ಲಿ  ನಷ್ಟ ಹೊಂದಿದ್ದರು ಎಂದು ತಿಳಿದುಬಂದಿದೆ. ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.