ADVERTISEMENT

ಪ್ರವಾಸಿ ಮಾರ್ಗದರ್ಶಿಗಳಿಂದ ಪತ್ರ ಚಳವಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 12:13 IST
Last Updated 24 ನವೆಂಬರ್ 2021, 12:13 IST
ಪ್ರವಾಸಿ ಮಾರ್ಗದರ್ಶಿಗಳು ಬುಧವಾರ ಹಂಪಿಯಲ್ಲಿ ಪತ್ರ ಚಳವಳಿ ನಡೆಸಿದರು
ಪ್ರವಾಸಿ ಮಾರ್ಗದರ್ಶಿಗಳು ಬುಧವಾರ ಹಂಪಿಯಲ್ಲಿ ಪತ್ರ ಚಳವಳಿ ನಡೆಸಿದರು   

ಹೊಸಪೇಟೆ(ವಿಜಯನಗರ): ಹಂಪಿ ಸೇರಿದಂತೆ ಇತರೆ ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ ಗೌರವಧನ‌ ನೀಡಬೇಕೆಂದು ಆಗ್ರಹಿಸಿ ಗೈಡ್‌ಗಳು ಬುಧವಾರ ಹಂಪಿಯಲ್ಲಿ ಪತ್ರ ಚಳವಳಿ ನಡೆಸಿದರು.

ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರಿಗೆ ಬರೆದ ಪತ್ರಗಳನ್ನು ಪೋಸ್ಟ್‌ ಮಾಡಿದರು. ‘ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಗದರ್ಶಿಗಳಿಗೆ ತರಬೇತಿ ಕೊಡಬೇಕು. ನೋಂದಾಯಿತ ಮಾರ್ಗದರ್ಶಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ವಿದ್ಯಾರಣ್ಯ ಪ್ರವಾಸಿ ಮಾರ್ಗದರ್ಶಿಗಳ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು ಒತ್ತಾಯಿಸಿದರು.

‘ಎಲ್ಲ ಮಾರ್ಗದರ್ಶಿಗಳು ಪ್ರವಾಸಿಗರು ಕೊಡುವ ಹಣದಲ್ಲೆ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಸರ್ಕಾರದಿಂದ ಆರ್ಥಿಕ ನೆರವು ಇಲ್ಲದೆ ಸಂಕಷ್ಟ ಎದುರಾಗಿದೆ. ವರ್ಷದಲ್ಲಿ ಹಲವು ತಿಂಗಳು ಪ್ರವಾಸಿಗರು ಭೇಟಿ ಕೊಡುವುದಿಲ್ಲ. ಈ ವೇಳೆ ಕಷ್ಟ ಎದುರಾಗುತ್ತದೆ. ಸರ್ಕಾರ ಮಾಸಿಕ ಗೌರವ ಧನ ನಿಗದಿ ಮಾಡಿದರೆ ಅನುಕೂಲವಾಗುತ್ತದೆ. ಸಾಂಸ್ಕೃತಿಕ ರಾಯಭಾರಿಗಳಾಗಿ ಮಾರ್ಗದರ್ಶಿಗಳು ಕೆಲಸ ಮಾಡುತ್ತಿದ್ದಾರೆ. ಅವರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.