ADVERTISEMENT

ಹಂಪಿ ಶೌಚಾಲಯಗಳಲ್ಲಿ ನೀರಿಲ್ಲ: ಪ್ರವಾಸಿಗರ ಅಳಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 14:28 IST
Last Updated 28 ಅಕ್ಟೋಬರ್ 2025, 14:28 IST
<div class="paragraphs"><p>ಮಹಾರಾಷ್ಟ್ರದ ಪುಣೆಯಿಂದ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯರು</p></div>

ಮಹಾರಾಷ್ಟ್ರದ ಪುಣೆಯಿಂದ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯರು

   

ಹೊಸಪೇಟೆ (ವಿಜಯನಗರ): ಹಂಪಿಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರತೊಡಗಿದ್ದು, ಕಮಲಮಹಲ್‌ ಸಮೀಪದ ಶೌಚಾಲಯದಲ್ಲಿ ವಾರದಿಂದೀಚೆಗೆ, ರಾಣಿ ಸ್ನಾನಗೃಹ ಸಮೀಪದ ಶೌಚಾಲಯದಲ್ಲಿ ಎರಡು ತಿಂಗಳಿಂದ ನೀರೇ ಇಲ್ಲ!

ಕೆಲವೇ ದಿನಗಳ ಹಿಂದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಹಂಪಿ ವೃತ್ತದ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಅವರ ಜತೆಗೆ ವಾಹನ ಪಾರ್ಕಿಂಗ್ ಶುಲ್ಕದ ಕುರಿತಂತೆ ‘ಪ್ರಜಾವಾಣಿ’ ಮಾತನಾಡಿದ್ದಾಗ, ಪ್ರಮುಖ ಪ್ರವಾಸಿ ತಾಣಗಳ ಬಳಿ ಶೌಚಾಲಯಗಳಿವೆ, ಅಗತ್ಯದ ಸೌಲಭ್ಯಗಳಲ್ಲಿ ಅದೂ ಒಂದು, ಅದನ್ನು ಪೂರೈಸಿದ್ದೇವೆಯಲ್ಲ ಎಂದು ಹೇಳಿದ್ದರು. ಆದರೆ ನೀರೇ ಇಲ್ಲದ ಶೌಚಾಲಯ ಇಂದು ಪ್ರವಾಸಿಗರನ್ನು ಅಣಕಿಸುತ್ತಿದ್ದು, ಮಹಿಳೆಯರಂತೂ ತೀರಾ ಕಷ್ಟಪಡುತ್ತಿದ್ದಾರೆ.

ADVERTISEMENT

‘ಹಂಪಿ ನಿಜಕ್ಕೂ ಅದ್ಭುತ ಪ್ರವಾಸಿ ತಾಣ, ಆದರೆ ಅಗತ್ಯದ ಸೌಲಭ್ಯ ಕಲ್ಪಿಸುವಲ್ಲಿ ಇಲಾಖೆಗಳು ಇಲ್ಲಿ ವಿಫಲವಾಗಿದೆ. ನೀರಿಲ್ಲದೆ ಶೌಚಾಲಯಗಳಿಗೆ ಹೋಗಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ’ ಎಂದು ಮಹಾರಾಷ್ಟ್ರದ ಪುಣೆಯಿಂದ ಬಂದಿದ್ದ ಮೂವರು ಮಹಿಳೆಯರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.