ADVERTISEMENT

ಹಂಪಿ ಉತ್ಸವ: ತೆಪ್ಪ ಸ್ಪರ್ಧೆಯಲ್ಲಿ ಗೆದ್ದ ತಾಯಿ–ಮಗಳು

ಪ್ರದೀಶ್ ಎಚ್.ಮರೋಡಿ
Published 29 ಜನವರಿ 2023, 13:36 IST
Last Updated 29 ಜನವರಿ 2023, 13:36 IST
   

ಹಂಪಿ (ಹೊಸಪೇಟೆ): ತಾ ಮುಂದು, ನಾ ಮುಂದು ಎಂದು ಹುಟ್ಟು ಹಾಕುತ್ತ ಅನೇಕರು ಸ್ಪರ್ಧೆಗಿಳಿದಿದ್ದರು. ಆದರೆ, ಆ ತಾಯಿ–ಮಗಳ ಜೋಡಿಯೆದುರು ಅವರ ಆಟ ನಡೆಯಲಿಲ್ಲ. ಇವರಿಬ್ಬರ ಜೋಡಿ ಮೊದಲು ಗುರಿ ಮುಟ್ಟುವುದರೊಂದಿಗೆ ಗೆಲುವಿಗೆ ಮುತ್ತಿಕ್ಕಿದರು.

ಹಂಪಿ ಉತ್ಸವದ ಪ್ರಯುಕ್ತ ಇಲ್ಲಿನ ಕಮಲಾಪುರದ ಐತಿಹಾಸಿಕ ಕೆರೆಯಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ತೆಪ್ಪ ಓಡಿಸುವ ಸ್ಪರ್ಧೆಯಲ್ಲಿ ಕಮಲಾಪುರದ ಹನುಮಕ್ಕ–ನಂದಿನಿ ಜೋಡಿ ಇಂಥದ್ದೊಂದು ಸಾಧನೆ ಮಾಡಿದರು.

ಮಹಿಳೆಯರ ವಿಭಾಗದಲ್ಲಿ ಕಮಲಾಪುರ ಹನುಮಕ್ಕ ಮತ್ತು ಅವರ ಪುತ್ರಿ ನಂದಿನಿ ಪ್ರಥಮ, ನಂದಕುಮಾರಿ ಮತ್ತು ಭಾರತಿ ದ್ವಿತೀಯ, ಗೋವಿಂದಮ್ಮ ಮತ್ತು ಮೊನ್ನಮ್ಮ ತೃತೀಯ ಬಹುಮಾನ ಪಡೆದರು.

ADVERTISEMENT

ಇನ್ನು, ಪುರುಷರ ಸ್ಪರ್ಧೆಯಲ್ಲಿ ಕಮಲಾಪುರದ ರವಿ ಮತ್ತು ರಾಮು ಪ್ರಥಮ, ಗೋಪಿ ಮತ್ತು ಹನುಮಂತ ದ್ವಿತೀಯ, ವಿಜಯ ಹಾಗೂ ರಾಜು ತೃತೀಯ ಸ್ಥಾನ ಗಳಿಸಿದರು.


ವಿಜೇತರಿಗೆ ಕ್ರಮವಾಗಿ ₹5000 ಪ್ರಥಮ, ₹3,000 ದ್ವಿತೀಯ ಹಾಗೂ ₹2,000 ತೃತೀಯ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು. ಒಟ್ಟು 29 ಪುರುಷರ ತಂಡ ಮತ್ತು 6 ಮಹಿಳೆಯರ ತಂಡಗಳು ಪಾಲ್ಗೊಂಡಿದ್ದವು. ಹುಟ್ಟು ಹಾಕುತ್ತ ಸ್ಪರ್ಧಿಗಳು ಸ್ಪರ್ಧೆ ಒಡ್ಡುತ್ತಿದ್ದರೆ ಇತ್ತ ಕೆರೆ ದಂಡೆಯಲ್ಲಿ ಕುಳಿತಿದ್ದವರು ಶಿಳ್ಳೆ, ಕೇಕೆ ಹಾಕುತ್ತ ಸ್ಪರ್ಧೆಯ ಮಜಾ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.