ADVERTISEMENT

ಹೊಸಪೇಟೆ: ಕೊಳೆಗೇರಿಯ 351 ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:55 IST
Last Updated 23 ಡಿಸೆಂಬರ್ 2025, 2:55 IST
<div class="paragraphs"><p>ಹೊಸಪೇಟೆಯಲ್ಲಿ ಸೋಮವಾರ ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಹಕ್ಕುಪತ್ರ ವಿತರಿಸಿದರು </p></div>

ಹೊಸಪೇಟೆಯಲ್ಲಿ ಸೋಮವಾರ ಶಾಸಕ ಎಚ್‌.ಆರ್‌.ಗವಿಯಪ್ಪ ಅವರು ಹಕ್ಕುಪತ್ರ ವಿತರಿಸಿದರು

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ಶಾಸಕ ಎಚ್‌.ಆರ್.ಗವಿಯಪ್ಪ ಅವರು ಸೋಮವಾರ ಇಲ್ಲಿ ನಗರದ 21 ಕೊಳೆಗೇರಿಗಳ 351 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು.

ADVERTISEMENT

‘ಸರ್ಕಾರಕ್ಕೆ ಬಡವರ ಬಗ್ಗೆ ಅಪಾರ ಕಾಳಜಿ ಇದೆ. ಈ ಹಕ್ಕುಪತ್ರಗಳ ವಿತರಣೆಗೆ ಮುಖ್ಯ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡರಿಂದಾಗಿಯೇ ಈ ಹಕ್ಕುಪತ್ರ ಸಿಗುವಂತಾಗಿದೆ. ಆದರೆ ಕೆಲವು ಕಾರಣಗಳಿಂದ ಹಕ್ಕುಪತ್ರ ವಿತರಣೆ ವಿಳಂಬವಾಗಿದೆ. ಇನ್ನು ಮುಂದೆ ಹಾಗಾಗುವುದಿಲ್ಲ, ನಾನು ಇಂದು ಚಾಲನೆ ಕೊಟ್ಟಿದ್ದೇನೆ ಅಷ್ಟೇ, ಮುಂದೆ ಆಯುಕ್ತರೇ ಮನೆ ಮನೆಗೆ ಹಕ್ಕುಪತ್ರ ತಲುಪಿಸುವ ಕೆಲಸ ಮಾಡುತ್ತಾರೆ’ ಎಂದು ಶಾಸಕ ಗವಿಯಪ್ಪ ಹೇಳಿದರು.

ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್‌, ಆಯುಕ್ತ ಎ.ಶಿವಕುಮಾರ್‌, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ., ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್‌, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ತಿಮ್ಮಣ್ನ ಸಹಿತ ಹಲವರು ಇದ್ದರು.

ಯಾರಿಗೆ ವಿತರಣೆ: ಕೊಂಡನಾಯಕನಹಳ್ಳಿ ಕೊಳೆಗೇರಿಯ 76 ಮಂದಿಗೆ ಹಕ್ಕುಪತ್ರ ನೀಡಲಾಗಿದ್ದರೆ, ಗಾಂಧಿನಗರ, ಸಂಕ್ಲಾಪುರ ಗ್ರಾಮದ ತಲಾ 31,ಸುಣ್ಣದಬಟ್ಟಿ ಪ್ರದೇಶದ 27, 25ನೇ ವಾರ್ಡ್‌ ಅಂಬೇಡ್ಕರ್ ನಗರದ 25, ಹಂಪಿ ರೋಡ್‌ 17, ಚಲವಾದಿಕೇರಿ, ಚಪ್ಪರದಹಳ್ಳಿ ಸಾಲ್ಟರ್‌ ಹೌಸ್‌ನ ತಲಾ 15, ವಾರಿಕೇರಿ ಹರಿಜನ ಕೇರಿಯ 13, ಗುತ್ತಿ ತೋಟಪ್ಪ 12, ಅಮರಾವತಿ ನ್ಯೂ 11 ಸಹಿತ ಇತರ ಕೊಳೆಗೇರಿ ನಿವಾಸಿಗಳಿಗೆ ಈ ಹಕ್ಕುಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.