ADVERTISEMENT

ಹೊಸಪೇಟೆ: ಇನ್ನರ್‌ ವೀಲ್‌ ಕ್ಲಬ್‌ಗೆ ಸುವರ್ಣ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 9:41 IST
Last Updated 9 ನವೆಂಬರ್ 2022, 9:41 IST
   

ಹೊಸಪೇಟೆ (ವಿಜಯನಗರ): ‘ಇನ್ನರ್‌ ವೀಲ್‌ ಕ್ಲಬ್‌ ಹೊಸಪೇಟೆ ಘಟಕ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ನ. 10ರಿಂದ 19ರ ವರಗೆ ಮಹಿಳಾ ಕೇಂದ್ರೀತ ಕಾರ್ಯಕ್ರಮಗಳನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದು ಕ್ಲಬ್‌ ಅಧ್ಯಕ್ಷೆ ರೇಖಾ ಪ್ರಕಾಶ್‌ ತಿಳಿಸಿದರು.
ಅಂತರರಾಷ್ಟ್ರೀಯ ಇನ್ನರ್‌ ವೀಲ್‌ ಕ್ಲಬ್‌ಗೆ 99 ವರ್ಷಗಳು ತುಂಬಿವೆ. ಹೊಸಪೇಟೆ ಘಟಕಕ್ಕೆ ನ. 19ರಂದು 50 ವರ್ಷಗಳು ತುಂಬಲಿವೆ. ‘ವಿ ಕೇರ್‌’ ಘೋಷವಾಕ್ಯದಡಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ನ. 10ರಂದು ಬೈಕ್‌ ರ್‍ಯಾಲಿ ಆಯೋಜಿಸಲಾಗಿದ್ದು, 150ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಪಾಲ್ಗೊಳ್ಳುವರು ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ನ. 14ರಂದು ಮಕ್ಕಳ ದಿನಾಚರಣೆ ಅಂಗವಾಗಿ ತಾಯಿ ಮತ್ತು ಮಕ್ಕಳಿಗಾಗಿ ರ್‍ಯಾಂಪ್‌ ಷೋ ಏರ್ಪಡಿಸಲಾಗಿದೆ. 18ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನ. 19ರಂದು ಸುವರ್ಣ ಮಹೋತ್ಸವದ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ‘ಸ್ವರ್ಣಿಂ’ ಹೆಸರಲ್ಲಿ ಸ್ಮರಣಿಕೆ ಬಿಡುಗಡೆಗೊಳಿಸಲಾಗುವುದು. ಸುಧಾ ಬರಗೂರು ಹಾಸ್ಯ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.
ಕ್ಲಬ್‌ನ ಜಿಲ್ಲಾಧ್ಯಕ್ಷೆ ಡಾ. ಮಾಧವಿ ದೇವಿ ಮಾತನಾಡಿ, ಸರ್ವಿಕಲ್‌ ಕ್ಯಾನ್ಸರ್‌, ಸ್ತನ ಕ್ಯಾನ್ಸರ್‌ ಮಹಿಳೆಯರಿಗೆ ಗೊತ್ತಿಲ್ಲದಂತೆ ಬರುತ್ತಿದೆ. ಅದು ಬರದಂತೆ ತಡೆಯಲಿಕ್ಕೆ ಇರುವ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. 10 ವರ್ಷದಿಂದ 40 ವರ್ಷದೊಳಗಿನ ಯಾರೂ ಬೇಕಾದರೂ ಪಡೆಯಬಹುದು. ಮಾರುಕಟ್ಟೆಯಲ್ಲಿ ಪ್ರತಿ ಲಸಿಕೆ ಬೆಲೆ ₹3 ಸಾವಿರ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸರ್ವೇ ನಡೆಸಿ, ಯಾವುದೇ ರೀತಿಯ ಕನಿಷ್ಠ ಸೌಲಭ್ಯವಿಲ್ಲದ ಸರ್ಕಾರಿ ಶಾಲೆ ದತ್ತು ಪಡೆದು ಅದನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಲಾಗಿದೆ. ಸ್ಯಾನಿಟರಿ ಪ್ಯಾಡ್‌ ಬಳಕೆಯ ಕುರಿತು ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಲಾಗುವುದು. ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಎಲ್ಲ ರೀತಿಯ ಕಾರ್ಯಕ್ರಮ ನಡೆಸಲಾಗುವುದು ಎಂದರು.

ADVERTISEMENT

ವಿಜಯಾ ಅಗ್ನಿಹೋತ್ರಿ, ಸ್ಮಿತಾ ಪ್ರಕಾಶ್‌, ಅಶ್ವಿನಿ ಶ್ರೀನಿವಾಸ್‌, ಮಣಿ ವಿಷ್ಣು, ನಂದಿನಿ ಚಿಕ್ಕಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.