ADVERTISEMENT

ಹೊಸಪೇಟೆ: ಇದೇ 16ರಂದು ಕರಡಿಧಾಮ ಸಫಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 9:03 IST
Last Updated 13 ಆಗಸ್ಟ್ 2021, 9:03 IST
ದರೋಜಿ ಕರಡಿಧಾಮದಲ್ಲಿ ಜಂಗಲ್‌ ಸಫಾರಿಯ ಪ್ರಾಯೋಗಿಕ ಸಂಚಾರ ನಡೆಸಲಾಯಿತು
ದರೋಜಿ ಕರಡಿಧಾಮದಲ್ಲಿ ಜಂಗಲ್‌ ಸಫಾರಿಯ ಪ್ರಾಯೋಗಿಕ ಸಂಚಾರ ನಡೆಸಲಾಯಿತು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ದರೋಜಿ ಕರಡಿಧಾಮದಲ್ಲಿ ಆ.16ರಿಂದ ಸಫಾರಿ ಆರಂಭಗೊಳ್ಳಲಿದೆ.

ಬೆಳಿಗ್ಗೆ 6.30ರಿಂದ 8.30, ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಸಫಾರಿ ಮಾಡಬಹುದು. ಆರು ವರ್ಷದೊಳಗಿನ ಮಕ್ಕಳಿಗೆ ಉಚಿತ, 6ರಿಂದ 12 ವರ್ಷದೊಳಗಿನವರಿಗೆ ತಲಾ ₹200, 12 ವರ್ಷ ಮೇಲಿನವರಿಗೆ ತಲಾ ₹400 ದರ ನಿಗದಿಪಡಿಸಲಾಗಿದೆ.

ಸಫಾರಿಗೆ ನಾಲ್ಕು ಜೀಪ್‌ಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚಿನ ಜನ ಬಂದರೆ ಜಂಗಲ್‌ ಲಾಡ್ಜ್‌ ವಾಹನ ಉಪಯೋಗಿಸಿಕೊಳ್ಳಲು ಯೋಜಿಸಲಾಗಿದೆ. ಎರಡು ಗಂಟೆಗಳಲ್ಲಿ 26 ಕಿ.ಮೀ ಸಂಚರಿಸಿ, ಕರಡಿ ಸೇರಿದಂತೆ ವಿವಿಧ ಜಾತಿ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು. ಈಗಾಗಲೇ ಸಫಾರಿ ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ.

ADVERTISEMENT

ಧಾಮದಲ್ಲಿ ವಿವಿಧ ಜಾತಿಯ ಅಪಾರ ಗಿಡಗಳನ್ನು ಬೆಳೆಸಿರುವುದರಿಂದ ವಾತಾವರಣ ಸಂಪೂರ್ಣ ಹಚ್ಚ ಹಸಿರಾಗಿದೆ. ಎರಡು ಗಂಟೆಗಳ ಸಫಾರಿ ವಿಶೇಷ ಅನುಭವ ನೀಡಲಿದೆ. ‘ದರೋಜಿ ಕರಡಿಧಾಮದಲ್ಲಿ ಜಂಗಲ್ ಸಫಾರಿ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಏ. 21ರಂದು ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.