ADVERTISEMENT

ವಿಜಯನಗರ: ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಉತ್ಸಾಹದ ಮತದಾನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 7:29 IST
Last Updated 21 ನವೆಂಬರ್ 2021, 7:29 IST
ಸರದಿ ಸಾಲಿನಲ್ಲಿ ನಿಂತಿರುವ ಮತದಾರರು
ಸರದಿ ಸಾಲಿನಲ್ಲಿ ನಿಂತಿರುವ ಮತದಾರರು    

ಹೊಸಪೇಟೆ (ವಿಜಯನಗರ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಉತ್ಸಾಹದಿಂದ ಮತದಾನ ನಡೆಯುತ್ತಿದೆ.

ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದಲೇ ಇಲ್ಲಿನ ತಾಲ್ಲೂಕು ಕಚೇರಿಯ ಮತದಾನ ಕೇಂದ್ರಕ್ಕೆ ಬಂದು ಹಲವರು ಹಕ್ಕು ಚಲಾಯಿಸಿದರು. ಆಯಾ ಅಭ್ಯರ್ಥಿಗಳ ಬೆಂಬಲಿಗರು ಮತದಾನ ಕೇಂದ್ರದ ಹೊರಗೆ ಬೀಡು ಬಿಟ್ಟಿದ್ದು, ಕೊನೆ ಗಳಿಗೆಯಲ್ಲೂ ಮನವೊಲಿಸುವ ಕಸರತ್ತು ನಡೆಸಿದರು.

ಅವಿಭಜಿತ ಬಳ್ಳಾರಿ ಜಿಲ್ಲೆಗೆ ಚುನಾವಣೆ ನಡೆಯುತ್ತಿದ್ದು, ಸಿ. ಮಂಜುನಾಥ, ಡಿ. ಅರುಣಕ್‌ಕುಮಾರ್‌, ಎಚ್‌. ಕೃಷ್ಣಪ್ಪ ಗುಣಸಾಗರ, ಕೆ. ಜಗದೀಶ್‌ ಬಳ್ಳಾರಿ, ನಿಷ್ಠಿ ರುದ್ರಪ್ಪ, ಟಿ.ಎಂ. ಪಂಪಾಪತಿ, ವಿನೋದಾ ಕರ್ಣಂ ಕಣದಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ 15,071 ಮತದಾರರಿದ್ದಾರೆ. ಒಟ್ಟು 19 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಸಂಜೆ ಏಳು ಗಂಟೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.