
ಪ್ರಜಾವಾಣಿ ವಾರ್ತೆ
ಕೊಟ್ಟೂರು (ವಿಜಯನಗರ ಜಿಲ್ಲೆ): ಸಾಹಿತಿ ಕುಂ.ವೀರಭದ್ರಪ್ಪ ಅವರಿಗೆ ಕಳೆದ ಎಂಟು-ಹತ್ತು ತಿಂಗಳಿಂದ ನಿರಂತರವಾಗಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಹಾಗೂ ಕಳೆದ ವಾರ ಹರಿಹರ ಮೂಲದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿರುವುದರಿಂದ ಮುನ್ನೆಚ್ಚರಿಕೆಯಾಗಿ ಪೊಲೀಸ್ ಇಲಾಖೆ ಅವರ ರಕ್ಷಣೆಗೆ ಗನ್ ಮ್ಯಾನ್ ನೇಮಿಸಿದೆ.
'ಕಳೆದರೆಡು ದಿನಗಳಿಂದ ಗನ್ ಮ್ಯಾನ್ ನೇಮಕಮಾಡಲಾಗಿದೆ, ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಅವಶ್ಯಕತೆ ಇಲ್ಲ ಎಂದರೂ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ' ಎಂದು ಕುಂ.ವೀ ಪ್ರತಿಕ್ರಿಯಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.