ADVERTISEMENT

ಡಣಾಪುರ: ಸಾಮೂಹಿಕ ವಿವಾಹ ಇಂದು

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 5:50 IST
Last Updated 15 ನವೆಂಬರ್ 2025, 5:50 IST
ಮರಿಯಮ್ಮನಹಳ್ಳಿ ಸಮೀಪದ 114– ಡಣಾಪುರ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರರ 25ನೇ ವರ್ಷದ ಪುರಾಣದ ಅಂಗವಾಗಿ ಶುಕ್ರವಾರ 151 ಮಹಿಳೆಯರಿಗೆ ಉಡಿ ತುಂಬಲಾಯಿತು
ಮರಿಯಮ್ಮನಹಳ್ಳಿ ಸಮೀಪದ 114– ಡಣಾಪುರ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರರ 25ನೇ ವರ್ಷದ ಪುರಾಣದ ಅಂಗವಾಗಿ ಶುಕ್ರವಾರ 151 ಮಹಿಳೆಯರಿಗೆ ಉಡಿ ತುಂಬಲಾಯಿತು   

ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಸಮೀಪದ 114- ಡಣಾಪುರ ಗ್ರಾಮದಲ್ಲಿ ಕಲಬುರಗಿ ಶರಣಬಸವೇಶ್ವರರ 25ನೇ ವರ್ಷದ ಪುರಾಣ ಮಹಾ ಮಂಗಲದ ಅಂಗವಾಗಿ ಶನಿವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಜ್ಜಯ್ಯ ಅವರ ತುಲಾಭಾರ ಕಾರ್ಯಕ್ರಮವೂ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಕೆ.ನೇಮರಾಜ ನಾಯ್ಕ ಉದ್ಘಾಟಿಸಲಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿ, ಕೊಟ್ಟೂರು ಬಸವಲಿಂಗ ಸ್ವಾಮೀಜಿ, ನಿರಂಜನ ಪ್ರಭು ದೇವರು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ದುರುಗಮ್ಮ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಇ.ತುಕಾರಾಂ, ಸ್ನೇಹಲತಾ ದಿನೇಶ್‍ಕುಮಾರ್ ಸಿಂಘೆ, ಬಹಿರ್ಜಿ ಘೋರ್ಪಡೆ ಭಾಗವಹಿಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.