ADVERTISEMENT

ಗುಡುಗು ಮಿಂಚಿನೊಂದಿಗೆ ಬಿರುಸು ಮಳೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:57 IST
Last Updated 8 ಮೇ 2021, 4:57 IST
ಹೊಸಪೇಟೆಯಲ್ಲಿ ಶುಕ್ರವಾರ ರಾತ್ರಿ ಮಳೆಯಾಯಿತು. ಮಿಂಚಿನಿಂದ ವಾಲ್ಮೀಕಿ ವೃತ್ತ ಬೆಳಕಿನಲ್ಲಿ ಮಿಂದೆದ್ದಿತು–ಚಿತ್ರ: ಲವ
ಹೊಸಪೇಟೆಯಲ್ಲಿ ಶುಕ್ರವಾರ ರಾತ್ರಿ ಮಳೆಯಾಯಿತು. ಮಿಂಚಿನಿಂದ ವಾಲ್ಮೀಕಿ ವೃತ್ತ ಬೆಳಕಿನಲ್ಲಿ ಮಿಂದೆದ್ದಿತು–ಚಿತ್ರ: ಲವ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಗುಡುಗು ಮಿಂಚಿನೊಂದಿಗೆ ಬಿರುಸು ಮಳೆಯಾಯಿತು.

ರಾತ್ರಿ 9ಕ್ಕೆ ಆರಂಭಗೊಂಡ ಮಳೆ ರಾತ್ರಿ 10.30ರ ವರೆಗೂ ಮುಂದುವರೆದಿತ್ತು. ಬಿರುಸಿನ ಮಳೆಯಿಂದಾಗಿ ವಾತಾವರಣ ಸಂಪೂರ್ಣ ತಂಪಾಗಿತ್ತು. ಬಿಸಿಲು, ಸೆಕೆಯಿಂದ ಬಸವಳಿದಿದ್ದ ಜನ ಸ್ವಲ್ಪ ನಿಟ್ಟುಸಿರು ಬಿಟ್ಟರು.

ನಗರ ಸೇರಿದಂತೆ ತಾಲ್ಲೂಕಿನ ಹಂಪಿ, ಕಮಲಾಪುರ, ಧರ್ಮದಗುಡ್ಡ, ಬಸವನದುರ್ಗ, ನಾಗೇನಹಳ್ಳಿ, ಹೊಸೂರು, ಇಪ್ಪಿತ್ತೇರಿ ಮಾಗಾಣಿ, ವ್ಯಾಸನಕೆರೆ, ಸಂಕ್ಲಾಪುರ, ಕಾರಿಗನೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.