
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ದರೋಜಿ ಕರಡಿಧಾಮ ಪ್ರದೇಶದಲ್ಲಿ ಕುರುಡುಗಪ್ಪಟ (ಸವನ್ನಾ ನೈಟ್‌ಜಾರ್) ಎಂಬ ಅಪರೂಪದ ನಿಶಾಚರ ಪಕ್ಷಿ ಗೋಚರಿಸಿದೆ.
ಪಕ್ಷಿ ವೀಕ್ಷಣೆ ಪ್ರವಾಸಿ ಸಂಘಟನೆ ‘ನೇಚರ್ ಇಂಡಿಯಾ ಮುಂಬೈ’ ನ ಆದೇಶ್ ಶಿವಕರ್ ಅವರ ತಂಡದ ಸದಸ್ಯೆ ಅಂಜಲಿ ಕೇಲ್ಕರ್ ಅವರ ಕ್ಯಾಮೆರಾ ಕಣ್ಣಿಗೆ ಈ ಪಕ್ಷಿ ಸೆರೆಯಾಗಿದೆ.
ದೊಡ್ಡ ಕಣ್ಣು, ವಿಶಿಷ್ಟ ಧ್ವನಿಯ ಈ ಪಕ್ಷಿಯು ನೆಲದಲ್ಲಿ ಗೂಡು ಕಟ್ಟಿ, ಮರದಲ್ಲಿ ವಿಶ್ರಮಿಸುತ್ತದೆ. ‘ನೈಟ್‌ಜಾರ್’ ಇರುವಿಕೆ ಇಲ್ಲಿಗೆ ಸಮೀಪದ ಗುಂಡಾ ಮೀಸಲು ಅರಣ್ಯ ಪ್ರದೇಶದಲ್ಲಿದೆ ಎಂಬ ಮಾಹಿತಿ ಇತ್ತು. ಆದರೆ, ಸುಲಭವಾಗಿ ಕಾಣಸಿಗುತ್ತಿರಲಿಲ್ಲ.
‘ನತ್ತಿಂಗ ಎಂದೂ ಕರೆಯಿಸಿಕೊಳ್ಳುವ ಇಂಡಿಯನ್ ನೈಟ್‌ಜಾರ್ ಪಕ್ಷಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಅದೇ ಕುಟುಂಬದ ಸವನ್ನಾ ನೈಟ್‌ಜಾರ್‌ನ ಆವಾಸಸ್ಥಾನ ಉತ್ತರ ಪಾಕಿಸ್ತಾನದಿಂದ ಇಂಡೋನೇಷ್ಯಾದವರೆಗಿನ ವ್ಯಾಪ್ತಿ ಹೊಂದಿದೆ’ ಎಂದು ಪಕ್ಷಿತಜ್ಞ ಪಂಪಯ್ಯಾ ಮಳಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.