ಹಗರಿಬೊಮ್ಮನಹಳ್ಳಿ(ವಿಜಯನಗರ): ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ವೈಟ್ ವಿಂಗ್ಡ್ ಟರ್ನ್ (ಬಿಳಿ ರೆಕ್ಕೆಯ ನದಿರೀವ್) ಪಕ್ಷಿಯು ಯುರೋಪ್ ದೇಶದಿಂದ ವಲಸೆ ಬಂದಿದ್ದು, ತಾಲ್ಲೂಕಿನ ನಾರಾಯಣದೇವರ ಕೆರೆ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಕಾಣಿಸಿಕೊಂಡಿದೆ.
ವಿಶೇಷವೆಂದರೆ ರಾಜ್ಯದಲ್ಲಿ ಈ ಪಕ್ಷಿ ಕಾಣಿಸಿಕೊಂಡಿದ್ದು ಎರಡನೇ ಬಾರಿ. ಮೊದಲ ಬಾರಿ ಭದ್ರಾ ಹಿನ್ನೀರು ಪ್ರದೇಶದಲ್ಲಿ ಕಳೆದ ವರ್ಷ ಕಾಣಿಸಿಕೊಂಡಿತ್ತು. ಹವಾಮಾನ ಬದಲಾವಣೆ, ಆಹಾರ ಅರಸಿ ಡಿಸೆಂಬರ್‌ನಲ್ಲಿ ಈ ಪಕ್ಷಿ ವಲಸೆ ಬಂದಿದೆ. ಈಗ ಮರಳುವ ಸಮಯ.
‘ರಾಜ್ಯಕ್ಕೆ ವಲಸೆ ಬರುವ ಪಕ್ಷಿಗಳ ಪ್ರಭೇದಗಳ ಸಂಖ್ಯೆ ಹೆಚ್ಚಾಗಲು ಇಲ್ಲಿನ ಜೀವವೈವಿಧ್ಯತೆ ಕಾರಣ. ಆದರೆ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಉಳುಮೆ ನಡೆಯುತ್ತಿರುವ ಕಾರಣ ಪಕ್ಷಿಗಳಿಗೆ ತೊಂದರೆಯಾಗಿದೆ. ಅಲಸಂದಿ ಬಿತ್ತನೆ ಸಂದರ್ಭದಲ್ಲಿ ನಿಷೇಧಿತ ಕ್ರಿಮಿನಾಶಕ ಬಳಸಲಾಗುತ್ತಿದೆ. ಇದರಿಂದ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ’ ಎಂದು ಪಕ್ಷಿ ವೀಕ್ಷಕ ವಿಜಯ್‍ಕುಮಾರ್ ಇಟ್ಟಿಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.