
ಹೊಸಪೇಟೆ (ವಿಜಯನಗರ): ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.ಒ ಎರಡನೇ ಸುತ್ತಿನ ಕಾರ್ಯಕ್ರಮ ಸೆ. 11ರಿಂದ ಆರಂಭಗೊಳ್ಳಲಿದ್ದು, ಪೋಷಕರು ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ನಾಯಕ ತಿಳಿಸಿದರು.
ಶನಿವಾರ ಈ ಕುರಿತು ಮಾಹಿತಿ ನೀಡಿರುವ ಅವರು, ಜಿಲ್ಲೆಯಲ್ಲಿ 123 ಅಪಾಯಕಾರಿ ಪ್ರದೇಶ ಸೇರಿದಂತೆ ಒಟ್ಟು 384 ಲಸಿಕಾ ಕೇಂದ್ರಗಳಲ್ಲಿ, ಅಂಗನವಾಡಿಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಹಾಗೂ ಗರ್ಭಿಣಿಯರು ಲಸಿಕೆ ಹಾಕಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಲಸಿಕೆ ಕುರಿತಾಗಿ ತಮ್ಮ ಮನೆಗಳಿಗೆ ಬಂದಲ್ಲಿ ಸಹಕರಿಸಬೇಕು ಎಂದರು.
5 ವರ್ಷದೊಳಗಿನ ಒಟ್ಟು 3,309 ಮಕ್ಕಳು ಸೇರಿದಂತೆ 580 ಗರ್ಭಿಣಿಯರಿಗೆ ಲಸಿಕೆ ಗುರಿ ನಿಗದಿಪಡಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎಂ.ಪಿ.ದೊಡ್ಡಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.