
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ನಾಗೇನಹಳ್ಳಿಯ ಉನ್ನತೀಕರಿಸಿದ ಪ್ರೌಢಶಾಲೆಯಲ್ಲಿ ಶನಿವಾರ ಮಣಿಪಾಲ ಎ.ವಿ.ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರು ಪರೀಕ್ಷಾ ಪೂರ್ವತಯಾರಿಗೆ ಪಾಠ ಮಾಡಿದರು.
ಇದೇ ಶಾಲೆಯಲ್ಲಿ ಓದಿ, ವೈದ್ಯಕೀಯ ವ್ಯಾಸಂಗ ಮಾಡಿ ಮನೋವೈದ್ಯರಾಗಿರುವ ಡಾ.ವಿರೂಪಾಕ್ಷ ಅವರು ತಮ್ಮ ನಿದರ್ಶನವನ್ನೇ ನೀಡಿ, ‘ಗೆಲುವಿಗಾಗಿ ಅನೇಕ ಯೋಜನೆಗಳು ಇರುತ್ತವೆ, ಆದರೆ ಸೋಲಿಗೆ ಕೇವಲ ನೆಪಗಳು ಮಾತ್ರ ಇರುತ್ತವೆ. ಹದಿಹರೆಯದ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಜವಾಬ್ದಾರಿಯುತವಾಗಿ ಜೀವನ ಸಾಗಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ದುರುಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಡಿ.ರವಿಶಂಕರ್, ಶಾಲೆಯ ಮುಖ್ಯಶಿಕ್ಷಕಿ ಸೌಜನ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.