
ಪ್ರಜಾವಾಣಿ ವಾರ್ತೆ
ಹೊಸಪೇಟೆ: ನ್ಯೂಯಾರ್ಕ್‌ನಲ್ಲಿ 1875ರಲ್ಲಿ ಹೆಲೆನಾ ಬ್ಲಾವಟ್ಸ್ಕಿ ಮತ್ತು ಹೆನ್ರಿ ಓಲ್ಕಾಟ್ ಥಿಯೊಸಾಫಿಕಲ್ ಸೊಸೈಟಿಗೆ ಭದ್ರ ಅಡಿಪಾಯ ಹಾಕಿದ್ದರಿಂದ ಈ ಸಂಸ್ಥೆ ಇಂದು ಜಗತ್ತಿನಲ್ಲಿ ಸರ್ವಧರ್ಮಗಳ ಆದರ್ಶ ತತ್ವಗಳನ್ನು ಪಾಲಿಸುತ್ತ ಮಾನವೀಯತೆಯ ಧರ್ಮವನ್ನು ಪ್ರತಿಪಾದಿಸುತ್ತಿದೆ ಎಂದು ಥಿಯೊಸಾಫಿಕಲ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಂ.ಜಗದೀಶ್ ಹೇಳಿದರು.
ಅವರು ಶನಿವಾರ ಇಲ್ಲಿನ ಥಿಯೊಸಾಫಿಕಲ್ ಕಾಲೇಜ್‌ನಲ್ಲಿ ನಡೆದ ಅಡ್ಯಾರ್ ದಿನಾಚರಣೆಯಲ್ಲಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಜಿ.ರಾಮಚಂದ್ರ ಗೌಡ, ಜಂಟಿ ಕಾರ್ಯದರ್ಶಿ ಅಶೋಕ ಜೀರೆ, ಖಜಾಂಚಿ ಕೆ.ಹನುಮಂತರಾವ್ ಮಾತನಾಡಿದರು. ಉಪಾಧ್ಯಕ್ಷ ಜೆ.ಸತ್ಯನಾರಾಯಣ, ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್, ನಿರ್ದೇಶಕ ವಿ.ಶರಣಪ್ಪ, ಬಿಸಾಟಿ ಪರುಶುರಾಮ, ಪೂಜಾ, ಪದವಿ ಕಾಲೇಜಿನ ಪ್ರಾಚಾರ್ಯೆ ಪ್ರೊ.ಅನಸೂಯ ಅಂಗಡಿ, ಸುಜಾತ ಡಿ.ಎನ್., ಲಾವಣ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.