ADVERTISEMENT

ವಿಜಯನಗರ: ತುಂಗಭದ್ರಾ ಅಣೆಕಟ್ಟೆಯಲ್ಲಿ ಗರ್ಡರ್‌ ಅಳವಡಿಕೆ ಕೆಲಸ ಆರಂಭ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 17:52 IST
Last Updated 27 ಡಿಸೆಂಬರ್ 2025, 17:52 IST
ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಗೇಟ್‌ಗೆ ಗರ್ಡರ್ ಅಳವಡಿಸುವ ಕೆಲಸ ಶನಿವಾರ ಆರಂಭವಾಯಿತು– ಪ್ರಜಾವಾಣಿ ಚಿತ್ರ
ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಗೇಟ್‌ಗೆ ಗರ್ಡರ್ ಅಳವಡಿಸುವ ಕೆಲಸ ಶನಿವಾರ ಆರಂಭವಾಯಿತು– ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ 18ನೇ ಕ್ರೆಸ್ಟ್‌ಗೇಟ್‌ ಅಳವಡಿಕೆಗೆ ಪೂರಕವಾಗಿ ಶನಿವಾರ ಗರ್ಡರ್‌ ಅಳವಡಿಸುವ ಕಾರ್ಯ ನಡೆಯಿತು. ಗುರುವಾರ ಎಂಡ್‌ ಗೇಟ್‌ ಅಳವಡಿಸಲಾಗಿತ್ತು.

ಹೊಸ ವಿನ್ಯಾಸದ ಗರ್ಡರ್‌ಗಳು ಕೂರುವ ಸ್ಥಳ, ಮತ್ತಿತರ ವಿಷಯಗಳಲ್ಲಿ ಬಹಳ ಲೆಕ್ಕಾಚಾರ ಇದ್ದವು. ಶುಕ್ರವಾರ ವ್ಯವಸ್ಥೆಗೊಳಿಸಿ, ಶನಿವಾರ ಕ್ರೇನ್ ಮೂಲಕ ಗರ್ಡರ್‌ ತಂದಿಡಲಾಯಿತು. ಮೂರು ಗರ್ಡರ್‌ಗಳನ್ನು ಕೂರಿಸಬೇಕಿದೆ.

‘ಒಂದು ಗೇಟ್‌ನಲ್ಲಿ 3 ಗರ್ಡರ್ ಸೇರಿ 12 ಭಾಗಗಳಿದ್ದು, ಪ್ರತ್ಯೇಕವಾಗಿ ಜೋಡಿಸಲಾಗುತ್ತದೆ’ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಯೊಬ್ಬರು ಹೇಳಿದರು. ಆಂಧ್ರಪ್ರದೇಶದ ಮಂಡಳಿಯ ಸದಸ್ಯ ಕೆ.ನರಸಿಂಹಮೂರ್ತಿ ಕಾಮಗಾರಿ ವೀಕ್ಷಿಸಿದರು.

ADVERTISEMENT
ತುಂಗಭದ್ರಾ ಅಣೆಕಟ್ಟೆಯ 18ನೇ ಗೇಟ್ ಬಳಿಗೆ ತರಲಾದ ಗರ್ಡರ್‌  –ಪ್ರಜಾವಾಣಿ ಚಿತ್ರ
ತುಂಗಭದ್ರಾ ಅಣೆಕಟ್ಟೆಯ 18ನೇ ಗೇಟ್‌ ಅಳವಡಿಕೆಯಾಗುವ ಸ್ಥಳ ಶನಿವಾರ ಈ ರೀತಿ ಕಾಣಿಸಿತು –ಪ್ರಜಾವಾಣಿ ಚಿತ್ರ
ತುಂಗಭದ್ರಾ ಅಣೆಕಟ್ಟೆಯ 18ನೇ ಗೇಟ್‌ ಅಳವಡಿಕೆಯಾಗುವ ಸ್ಥಳ ಶನಿವಾರ ಈ ರೀತಿ ಕಾಣಿಸಿತು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.