
ಪ್ರಜಾವಾಣಿ ವಾರ್ತೆ
ಬಂಧನ
ಹೂವಿನಹಡಗಲಿ: ಪಟ್ಟಣ ಹಾಗೂ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಪಟ್ಟಣ ಹೊರ ವಲಯ ನಂದಿಪುರ ದೊಡ್ಡಬಸವೇಶ್ವರ ಗದ್ದುಗೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ಸುನೀಲ್ ನಾಯ್ಕ ಎಂಬಾತನ ಬಂಧಿಸಿ ₹10 ಸಾವಿರ ಮೌಲ್ಯದ 393.85 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಟ್ಟಿಗಿ ಗ್ರಾಮದ ಹೊರ ವಲಯ ಹಾಲಿನ ಡೇರಿ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ದಾಸರಹಳ್ಳಿ ತಾಂಡಾದ ನಿವಾಸಿ, ಮೂಲತಃ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಶಿಡೇನೂರು ಗ್ರಾಮದ ಶಿವಶಂಕರ ಬಿದರಿ ಎಂಬಾತನ ಬಂಧಿಸಿ ₹5ಸಾವಿರ ಮೌಲ್ಯದ 100 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಬ್ಬರನ್ನೂ ನ್ಯಾಯಾಲಯ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.