
ಹೊಸಪೇಟೆ (ವಿಜಯನಗರ): ಸೈಬರ್ ವಂಚನೆ, ಕೆಲಸ ಕೊಡಿಸುವುದಾಗಿ ಹೇಳಿ ಮೋಸ, ಸ್ಥಳದಲ್ಲಿಯೇ ಸಾಲ ನೀಡುವುದಾಗಿ ಆಮಿಷ ಒಡ್ಡಿ ಹಣ ಲೂಟಿಯಂತಹ ಅಪರಾಧಗಳಿಂದ ಪಾರಾಗುವ ಸಲಹೆ ನೀಡುವ, ರಸ್ತೆ ಸುರಕ್ಷತೆಯಂತಹ ಸಾಮಾನ್ಯ ವಿಷಯಗಳಲ್ಲಿ ಜನರಿಗೆ ಮನವರಿಕೆ ಮಾಡುವಂತಹ 2026ರ ನೂತನ ಕ್ಯಾಲೆಂಡರ್ ಅನ್ನು ಜಿಲ್ಲಾ ಪೊಲೀಸ್ ಇಲಾಖೆ ‘ಪ್ರಜಾವಾಣಿ’ ಸಹಯೋಗದಲ್ಲಿ ಹೊರತಂದಿದೆ.
ಎಸ್‌ಪಿ ಎಸ್.ಜಾಹ್ನವಿ ಅವರು ಬುಧವಾರ ಕ್ಯಾಲೆಂಡರ್ ಬಿಡುಗಡೆಗೊಳಿಸಿ, ‘ಕ್ಯಾಲೆಂಡರ್‌ನ ಪ್ರತಿ ಪುಟದಲ್ಲಿ ಜನರು ನಿತ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ತೊಂದರೆಗಳಿಗೆ ಪರಿಹಾರ ಸೂಚಿಸುವ ಮಾಹಿತಿ ಇದೆ. ಜನರು ಇದರ ಸದ್ಬಳಕೆ ಮಾಡಿಕೊಂಡು ಅಪರಾಧ ಕೃತ್ಯಗಳಿಂದ, ವಂಚನೆಗಳಿಂದ ಪಾರಾಗಬೇಕು’ ಎಂದರು.
‘ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಕೆಲವೊಂದು ಪಿಡುಗುಗಳ ನಿವಾರಣೆಗೆ ಇರುವ ಕಾಯ್ದೆಗಳು, ರಸ್ತೆ ಸಂಚಾರ ನಿಯಮ ಪಾಲನೆ, ಸರಗಳವು ವಿರುದ್ಧ ರಕ್ಷಣೆ, ಸಂಚಾರ ಸಾಥಿ ಮೊಬೈಲ್ ಆ್ಯಪ್‌ನ ಮಹತ್ವ, ನಶೆಮುಕ್ತ ಕರ್ನಾಟಕದ ಧ್ಯೇಯಗಳ ಕುರಿತಂತೆ ಸಹ ಕ್ಯಾಲೆಂಡರ್‌ನಲ್ಲಿ ಮಾಹಿತಿ ಇದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.