ADVERTISEMENT

ವಿಜಯನಗರ: ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 7:50 IST
Last Updated 1 ಜನವರಿ 2026, 7:50 IST
ಝಾನ್ಸಿ
ಝಾನ್ಸಿ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಮಲಾಪುರ ಸಮೀಪದ ವೆಂಕಟಾಪುರ ಕ್ಯಾಂಪ್‌ ಗುಂಡ್ಲಕೇರಿ ಟಿ.ಬಿ.ಬೋರ್ಡ್‌ ಕ್ವಾರ್ಟರ್ಸ್‌ನಲ್ಲಿ ಬುಧವಾರ ಪತಿಯು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

‘ಟಿಬಿ ಡ್ಯಾಂನ ವಂಕಯ್ಯ ಕ್ಯಾಂಪ್‌ ನಿವಾಸಿ ಝಾನ್ಸಿ (36) ಮೃತರು. ಆಕೆಯ ಪತಿ, ವೆಲ್ಡಿಂಗ್ ಕೆಲಸಗಾರ ಸೆಲ್ವಕುಮಾರ್ (40) ಕೊಲೆ ಆರೋಪಿ. ಆತನನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ ತಿಳಿಸಿದ್ದಾರೆ.

‘ಝಾನ್ಸಿ ಮತ್ತು ಸೆಲ್ವಕುಮಾರ್‌ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಏಳು ವರ್ಷ ಚೆನ್ನಾಗಿಯೇ ಇದ್ದರು. ಆಧರೆ, ನಂತರದ ವರ್ಷಗಳಲ್ಲಿ ಇಬ್ಬರ ನಡುವೆ ಜಗಳವಾಗುತಿತ್ತು. ಮೂರು ತಿಂಗಳ ಹಿಂದೆ ಜಗಳವಾದಾಗ, ಮನನೊಂದ ಝಾನ್ಸಿ ವೆಂಕಟಾಪುರದ ತಮ್ಮ ಚಿಕ್ಕಪ್ಪನ ಮನೆಗೆ ಬಂದು ಅಲ್ಲೇ ಇದ್ದರು’ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಅಲ್ಲಿಗೆ ಬಂದಿದ್ದ ಸೆಲ್ವಕುಮಾರ ಪತ್ನಿಯ ಜತೆಗೆ ಜಗಳವಾಡಿದ್ದ. ಬುಧವಾರ ಬೆಳಿಗ್ಗೆ ಮತ್ತೆ ಬಂದು ಮನೆಗೆ ಬರುವಂತೆ ಹೇಳಿದಾಗ, ಹಿರಿಯರು ಹೇಳಿದರೆ ಎರಡು ದಿನದಲ್ಲಿ ಬರುವುದಾಗಿ ಝಾನ್ಸಿ ಉತ್ತರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಸೆಲ್ವಕುಮಾರ, ಪಕ್ಕದಲ್ಲಿದ್ದ ಕೊಡಲಿ ತೆಗೆದುಕೊಂಡು ಬಂದು ಪತ್ನಿಯ ಕುತ್ತಿಗೆಯನ್ನು ಕೊಚ್ಚಿದ’ ಎಂದು ಕಮಲಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಸ್‌ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಟಿ.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ,   ಪರಿಶೀಲಿಸಿದರು. 

ಸೆಲ್ವಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.