ADVERTISEMENT

ವಿಜಯಶ್ರೀ ಮೋಟಾರ್‌ ವರ್ಕ್ಸ್‌ ಶೋ ರೂಂ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 5:05 IST
Last Updated 8 ಏಪ್ರಿಲ್ 2022, 5:05 IST
ಹೊಸಪೇಟೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಐಚರ್‌ ಕಂಪನಿ ಸಿಇಒ ವಿನೋದ್‌ ಅಗರವಾಲ್‌ ಅವರಿಗೆ ವಿಜಯಶ್ರೀ ಮೋಟಾರ್‌ ವರ್ಕ್ಸ್‌ ಶೋ ರೂಂ ಮಾಲೀಕ ರಾಜು ಭೂರಟ್ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು
ಹೊಸಪೇಟೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಐಚರ್‌ ಕಂಪನಿ ಸಿಇಒ ವಿನೋದ್‌ ಅಗರವಾಲ್‌ ಅವರಿಗೆ ವಿಜಯಶ್ರೀ ಮೋಟಾರ್‌ ವರ್ಕ್ಸ್‌ ಶೋ ರೂಂ ಮಾಲೀಕ ರಾಜು ಭೂರಟ್ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು   

ಹೊಸಪೇಟೆ (ವಿಜಯನಗರ): ಇಲ್ಲಿನ ಬಳ್ಳಾರಿ ರಸ್ತೆಯಲ್ಲಿ ವಿಜಯಶ್ರೀ ಐಚರ್‌ ಮೋಟಾರ್‌ ವರ್ಕ್ಸ್‌ ಶೋ ರೂಂ ಅನ್ನು ಬುಧವಾರ ಐಚರ್‌ ಕಂಪನಿ ಸಿಇಒ ವಿನೋದ್‌ ಅಗರವಾಲ್‌ ಉದ್ಘಾಟಿಸಿದರು.

‘ವೊಲ್ವೊ ಮತ್ತು ಐಚರ್‌ ಕಂಪನಿ ಜತೆಗೂಡಿ ಟ್ರಕ್‌, ಬಸ್‌ ಸೇರಿದಂತೆ ಇತರೆ ವಾಹನಗಳನ್ನು ತಯಾರಿಸುತ್ತಿವೆ. ಇಡೀ ದೇಶದಲ್ಲಿ ಒಟ್ಟು 663 ಶೋ ರೂಂಗಳಿವೆ. ಹೊಸಪೇಟೆ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 31 ಶೋ ರೂಂಗಳು ಕೆಲಸ ನಿರ್ವಹಿಸುತ್ತಿವೆ. ಗುಣಮಟ್ಟ, ಉತ್ತಮ ಸೇವೆ ನಮ್ಮ ಮೂಲಮಂತ್ರ’ ಎಂದು ವಿನೋದ್‌ ಹೇಳಿದರು.

‘ವಿಜಯನಗರ, ಬಳ್ಳಾರಿ ಜಿಲ್ಲೆಯಲ್ಲಿ ಅದಿರು, ಸಿಮೆಂಟ್‌ ಹಾಗೂ ಉಕ್ಕಿನ ಕೈಗಾರಿಕೆಗಳಿವೆ. ಈ ಭಾಗದಲ್ಲಿ ಟ್ರಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಶೋ ರೂಂ ಆರಂಭಿಸಲಾಗಿದೆ’ ಎಂದು ತಿಳಿಸಿದರು. ಕಂಪನಿ ಉಪಾಧ್ಯಕ್ಷ ರಮೇಶ, ಶೋ ರೂಂ ಮಾಲೀಕ ರಾಜು ಭೂರಟ್‌ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.