
ಹೊಸಪೇಟೆ (ವಿಜಯನಗರ): ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಬಿಳಿ ಜೋಳ ಖರೀದಿಗೆ ನೋಂದಾಯಿಸಿಕೊಳ್ಳಲು ಈಗಾಗಲೇ ನೋಂದಾಣಿ ಕೇಂದ್ರ ತೆರೆಯಲಾಗಿದ್ದು, ಎಫ್‌ಎಕ್ಯೂ ಬಿಳಿ ಜೋಳವನ್ನು ರೈತರಿಂದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ನೇರವಾಗಿ ಖರೀದಿಸುತ್ತಿದೆ. ಈ ಸಂಬಂಧ ರೈತರು ತ್ವರಿತವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಎಂಎಸ್‌ಪಿ ಯೋಜನೆಯಡಿ ಪ್ರತಿ ಎಕರೆಗೆ ಕನಿಷ್ಠ 15 ಕ್ವಿಂಟಲ್‌ನಿಂದ ಗರಿಷ್ಠ 150 ಕ್ವಿಂಟಲ್‌ವರೆಗೆ ₹3,699 ನಂತೆ ಬಿಳಿಜೋಳ ಹೈಬ್ರಿಡ್ ಹಾಗೂ ಮಾಲ್ದಂಡಿ ₹3,749 ನಂತೆ ಖರೀದಿ ಮಾಡಲಾಗುವುದು.
ನೋಂದಣಿ ಮತ್ತು ಖರೀದಿ ಕೇಂದ್ರ: ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಎಪಿಎಂಸಿ ಮಾರುಕಟ್ಟೆಯಲ್ಲಿ, ಕೂಡ್ಲಿಗಿ ತಾಲ್ಲೂಕಿನ ಕೂಡ್ಲಿಗಿ ಎಪಿಎಂಸಿ ಮತ್ತು ಚಿಕ್ಕಜೋಗಿಹಳ್ಳಿ ಎಪಿಎಂಸಿ ಯಾರ್ಡ್, ಕೊಟ್ಟೂರು ತಾಲ್ಲೂಕಿನ ಕೊಟ್ಟೂರು ಎಪಿಎಂಸಿ ಹಾಗೂ ಉಜ್ಜಿನಿಯಲ್ಲಿ ಮತ್ತು ಹರಪನಹಳ್ಳಿ ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆ, ಅರಸಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೋಂದಣಿ ಕೇಂದ್ರಗಳಲ್ಲಿ ರೈತರು ಎಫ್‌ಐಡಿಯೊಂದಿಗೆ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದ್ದಾರೆ.
ಮೆಕ್ಕೆಜೋಳ–ಅವಧಿ ವಿಸ್ತರಣೆ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಾರುಕಟ್ಟೆಯಲ್ಲಿ ಎಫ್‌ಎಕ್ಯೂ ಯೋಜನೆಯಡಿ ಗುಣಮಟ್ಟದ ಮೆಕ್ಕೆಜೋಳ ಮಾರಾಟಕ್ಕೆ ನೋಂದಣಿ ಮತ್ತು ಮಾರಾಟ ಮಾಡಲಾಗುತ್ತಿದೆ. ನೊಂದಣಿಗಾಗಿ ಫೆ.13ರವರೆಗೆ ಹಾಗೂ ಯುಪಿಎಂ ವೇದಿಕೆಯಡಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಫೆ.21ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.