ಹೊಸಪೇಟೆ (ವಿಜಯನಗರ): ಸಮೀಪದ ಗಾಳೆಮ್ಮನಗುಡಿ ಗ್ರಾಮದ ಬಳಿಯ ಎಲ್‍ಎಲ್‍ಸಿ ಕಾಲುವೆಯಲ್ಲಿ ಭಾನುವಾರ ಸುಮಾರು 35 ವರ್ಷದ ಅಪರಿಚಿತ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಭಾನುವಾರ ಮಧ್ಯಾಹ್ನ ಕಾಲುವೆಗೆ ಹಾರಿದ್ದ ಮಹಿಳೆಯನ್ನು, ಈಜಲು ಬಂದ ಕೆಲ ಯುವಕರು ನೀರಿನಿಂದ ಹೊರ ತಂದಿದ್ದರು. ಆದರೆ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ.
ಈ ಕುರಿತು ಹಳೇಮಲಪನಗುಡಿ ಗ್ರಾಮ ಪಂಚಾಯಿತಿಯಲ್ಲಿ ನೀರು ಬಿಡುವ ಸಿಬ್ಬಂದಿ ಶಂಕರ್‍ನಾಯ್ಕ ಅವರು ಹಂಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.