ADVERTISEMENT

ಹೊಸಪೇಟೆ: 19ರಂದು ಭೂಮಿಕಾ ಕ್ಲಬ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:56 IST
Last Updated 17 ಜುಲೈ 2025, 6:56 IST
ಮಂಜಮ್ಮ ಜೋಗತಿ
ಮಂಜಮ್ಮ ಜೋಗತಿ   

ಹೊಸಪೇಟೆ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗ ಮತ್ತು ‘ಫ್ರೀಡಂ ಆಯಿಲ್’ ಸಹಯೋಗದಲ್ಲಿ ‘ಭೂಮಿಕಾ ಕ್ಲಬ್’ ಮಹಿಳೆಯರ ವಿಶೇಷ ಕಾರ್ಯಕ್ರಮ ಶನಿವಾರ (ಜುಲೈ 19) ಹೊಸಪೇಟೆಯಲ್ಲಿ ನಡೆಯಲಿದೆ.

ಹೊಸ‍ಪೇಟೆಯಲ್ಲಿ ಇದೇ ಮೊದಲ ಬಾರಿ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬಹುದು. ಸ್ನೇಹಿತರು ಮತ್ತು ಆಪ್ತರೊಂದಿಗೆ ಬಂದು, ವಿಶಿಷ್ಟವಾದ ಕಾರ್ಯಕ್ರಮದಲ್ಲಿ ಸಂಭ್ರಮಿಸ
ಬಹುದು. ಹಲವು ವಿಶೇಷ ಸಂಗತಿಗಳನ್ನು ಅರಿಯುವುದರ ಜೊತೆಗೆ ಹೊಸ ಸ್ನೇಹಿತರನ್ನು ಪರಿಚಯಿಸಿಕೊಳ್ಳಬಹುದು.

ಪದ್ಮಶ್ರೀ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ.ಎಸ್ ಮತ್ತು ಸಾರೆಗಮಪ ಖ್ಯಾತಿಯ ಭೂಮಿಕಾ ಗಡದ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಡಿಕೆಡಿ ಮತ್ತು ಈ ಟಿವಿ ರಿಯಾಲಿಟಿ ಶೋ ಖ್ಯಾತಿಯ ಹರ್ಷಿತಾ ಅವರು ಶಾಸ್ತ್ರೀಯ ನೃತ್ಯ ಪ್ರಸ್ತುತಪಡಿಸುವರು. ವೈದಿಕ ಧ್ಯಾನದ ಬಗ್ಗೆ ರಶ್ಮಿ ಚಂದ್ರಶೇಖರ್ ಅವರು ಉಪನ್ಯಾಸ ನೀಡುವರು. ನಂದಗೋಕುಲ ಕಾರ್ಯಕ್ರಮದ ವಲ್ಲಭ ಮತ್ತು ಅಮೂಲ್ಯ ಅವರನ್ನು ಭೇಟಿಯಾಗಬಹುದು. ಇವೆಲ್ಲದರ ಜೊತೆಗೆ ಅಡುಗೆ ಸ್ಪರ್ಧೆಯೂ ಇರಲಿದೆ.

ADVERTISEMENT

ಕಾರ್ಯಕ್ರಮದುದ್ದಕ್ಕೂ ಆಟಗಳನ್ನು ಆಡಬಹುದು. ಹಾಸ್ಯ ಚಟಾಕಿ ಹಂಚಿಕೊಳ್ಳ
ಬಹುದು. ಬಗೆಬಗೆಯ ತಿನಿಸು ಸವಿಯಬಹುದು. ಅಚ್ಚರಿದಾಯಕ ಕೊಡುಗೆಗಳನ್ನೂ ಗಳಿಸಬಹುದು. ಈ ಕಾರ್ಯಕ್ರಮಕ್ಕೆ ಕಲರ್ಸ್ ಕನ್ನಡ ವಾಹಿನಿಯ ಸಹಯೋಗವಿದೆ.

ಸ್ಥಳ: ಪುನೀತ್‌ ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣ, ಹಂಪಿ, ತುಂಗಭದ್ರ ಅಣೆಕಟ್ಟು ಬಳಿ, ಬೈಪಾಸ್ ರಸ್ತೆ, ಹೊಸಪೇಟೆ.

ದಿನಾಂಕ, ಸಮಯ: ಜುಲೈ 19, ಮಧ್ಯಾಹ್ನ 3.00

ಸಂಪರ್ಕ ದೂರವಾಣಿ ಸಂಖ್ಯೆ: 99168 83163 ಅಥವಾ 94489 69764

ವಲ್ಲಭ
ಅಮೂಲ್ಯ
ಜಾಹ್ನವಿ ಎಸ್.

Cut-off box - ಸ್ಥಳ: ಪುನೀತ್‌ ರಾಜ್‌ಕುಮಾರ್ ಒಳಾಂಗಣ ಕ್ರೀಡಾಂಗಣ ಹಂಪಿ ತುಂಗಭದ್ರ ಅಣೆಕಟ್ಟು ಬಳಿ ಬೈಪಾಸ್ ರಸ್ತೆ ಹೊಸಪೇಟೆ. ದಿನಾಂಕ ಸಮಯ: ಜುಲೈ 19 ಮಧ್ಯಾಹ್ನ 3.00 ಸಂಪರ್ಕ ದೂರವಾಣಿ ಸಂಖ್ಯೆ: 9449109148 ಅಥವಾ 9481048174.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.