ADVERTISEMENT

ಹೊಸಪೇಟೆ: ತಡರಾತ್ರಿ ಕೆಜಿಎಫ್ ಚಿತ್ರ ಪ್ರದರ್ಶನ, ಪಟಾಕಿ ಸಿಡಿಸಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 2:34 IST
Last Updated 14 ಏಪ್ರಿಲ್ 2022, 2:34 IST
ಹೊಸಪೇಟೆಯ ಲಕ್ಷ್ಮಿ ಚಿತ್ರಮಂದಿರದ ಬಳಿ ಅಭಿಮಾನಿಗಳು ಜಮಾಯಿಸಿದ್ದರು.
ಹೊಸಪೇಟೆಯ ಲಕ್ಷ್ಮಿ ಚಿತ್ರಮಂದಿರದ ಬಳಿ ಅಭಿಮಾನಿಗಳು ಜಮಾಯಿಸಿದ್ದರು.   

ಹೊಸಪೇಟೆ (ವಿಜಯನಗರ): ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್; ಚಾಪ್ಟರ್ 2 ನಗರದಲ್ಲಿ ಪ್ರದರ್ಶನಗೊಂಡಿತು.

ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳು ಜಮಾಯಿಸಿದ್ದರು. ಚಿತ್ರಮಂದಿರದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ನೆಚ್ಚಿನ ನಟನ ಭಾವಚಿತ್ರಕ್ಕೆ ಹಾರಿ ಹಾಕಿ ಅಭಿಮಾನ ತೋರಿದರು.

ತಡರಾತ್ರಿ 1.50ಕ್ಕೆ ಚಿತ್ರ ಮೊದಲ ಪ್ರದರ್ಶನ ಕಂಡಿತು. ಹಲವರಿಗೆ ಟಿಕೆಟ್ ಸಿಗದೇ ನಿರಾಸೆಯಿಂದ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT