ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣ ಒಂದೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 7:56 IST
Last Updated 7 ಡಿಸೆಂಬರ್ 2013, 7:56 IST

ಮುದ್ದೇಬಿಹಾಳ: ‘ದಲಿತರು ಶತ ಶತಮಾನಗಳಿಂದಲೂ ಶೋಷಣೆ ಗೊಳಗಾಗಿದ್ದು, ಅವರು ತಮ್ಮ ದಾಸ್ಯದ ಸಂಕೋಲೆಗಳನ್ನು ಕಿತ್ತೆಸೆಯಲು ಉನ್ನತ ಶಿಕ್ಷಣ ಪಡೆಯಬೇಕು ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಹಾಲಣ್ಣವರ ಹೇಳಿದರು.

ಪಟ್ಟಣದ ಸರ್.ಎಂ.ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ  ತಾಲ್ಲೂಕು ಆಡಳಿತ  ಶುಕ್ರವಾರ ಹಮ್ಮಿ ಕೊಂಡಿದ್ದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 57 ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ದಲಿತರಿಗೆ ಸಾಮಾಜಿಕ ವಾಗಿ, ಧಾರ್ಮಿಕವಾಗಿ, ರಾಜಕೀಯ ವಾಗಿ ಎಲ್ಲ ರಂಗಗಳಲ್ಲಿ ಅವಕಾಶ ಸಿಗುವಂತಾಗಬೇಕು. ಹೀಗೆ ಸಿಗುವ ಅವ ಕಾಶಗಳನ್ನು ಬಳಸಿಕೊಂಡು ಅವರು ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು.

ದಲಿತ ನಾಯಕ ಡಿ.ಬಿ.ಮುದೂರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾ ಗಿದ್ದು, ಇದನ್ನು ತೊಡೆದುಹಾಕಲು ಎಲ್ಲ ಪ್ರಗತಿಪರ ಮನಸ್ಸುಗಳು ಕೆಲಸ ಮಾಡ ಬೇಕು. ಅಸ್ಪೃಶ್ಯತೆ ಆಚರಣೆ ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಂದಾಗಲೇ ಈ ಅನಿಷ್ಟ ಪದ್ಧತಿ ನಿರ್ಮೂಲನೆಯಾ ಗುತ್ತದೆ.  ದಲಿತರ ಸರ್ವಾಂಗೀಣ ಅಭಿ ವೃದ್ಧಿಗಾಗಿ ಶುರುವಾಗಿರುವ  ಸರ್ಕಾ ರದ ಹತ್ತು ಹಲವು  ಕಲ್ಯಾಣ ಯೋಜನೆಗಳು ನಿಜವಾದ ಫಲಾ ನುಭವಿಗಳಿಗೆ ಮುಟ್ಟುವಂತಾದರೆ ಅಂಬೇಡ್ಕರ್‌ರ ಕನಸು ನನಸಾಗುತ್ತದೆ ಎಂದು ಹೇಳಿದರು.

ದಲಿತ ನಾಯಕರಾದ ಸಿದ್ದು ಕಟ್ಟಿಮನಿ, ಹರೀಶ ನಾಟೀಕಾರ ಮೊದಲಾದವರು ಮಾತನಾಡಿದರು.

ಇದಕ್ಕೂ  ಮುನ್ನ ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೇ ಡ್ಕರ ಮೂರ್ತಿಗೆ  ತಹಶೀಲ್ದಾರ್ ಸಿ.ಲಕ್ಷ್ಮಣ ಅವರು ಮಾಲಾರ್ಪಣೆ ಮಾಡಿದರು.
ನಂತರ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.


ಮೆರವಣಿಗೆಯಲ್ಲಿ ತಾಲ್ಲೂಕು ಪಂಚಾಯಿತಿ ಇ.ಒ. ಅಕ್ಕಮಹಾದೇವಿ ಹೊಕ್ರಾಣಿ, ಎನ್.ಆರ್.ಉಂಡಿಗೇರಿ, ಸಿ.ಆರ್.ಪೊಲೀಸ್ ಪಾಟೀಲ, ಎಂ.ಆರ್.ದಾಯಿ, ದವಲಪ್ಪ ಅಜಮನಿ, ಶಿವಪುತ್ರ ಅಜಮನಿ, ಶಂಕರ ಛಲವಾದಿ, ಸಿದ್ದರಾಜ ಹೊಳಿ, ಸಿ.ಪಿ.ಐ. ಸುದರ್ಶನ ಪಟ್ಟಣಕುಡೆ, ಪಿ.ಎಸ್.ಐ. ಎಸ್.ಬಿ.ಮಾಳಗೊಂಡ, ಕೆ.ಎಂ.ಇಬ್ರಾಹಿಂಪೂರ, ಯಮನಪ್ಪ ಚಲವಾದಿ, ನಾಗೇಶ ಭಜಂತ್ರಿ, ಅಶೋಕ ಪಾದಗಟ್ಟಿ, ಎ.ಎಸ್.ಐ. ಕಬಾಡೆ ಮೊದಲಾದವರಿದ್ದರು. ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ  ರವಿ ನಾಯಕ ಸ್ವಾಗತಿಸಿದರು.

ಚನ್ನಪ್ಪ ವಿಜಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಯು.ಕಾಲೇಜಿನ ಪ್ರಾಚಾರ್ಯ ಬಿರಾದಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.