ADVERTISEMENT

ಖಾಸ್ಗತೇಶ್ವರ ಜಾತ್ರೆ: ಭವ್ಯ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 6:22 IST
Last Updated 22 ಜುಲೈ 2013, 6:22 IST
ತಾಳಿಕೋಟೆ ಪಟ್ಟಣದ ಆರಾಧ್ಯ ದೈವವೆನಿಸಿರುವ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಭಾನುವಾರ ಭವ್ಯ ರಥೋತ್ಸವ ಜರುಗಿತು
ತಾಳಿಕೋಟೆ ಪಟ್ಟಣದ ಆರಾಧ್ಯ ದೈವವೆನಿಸಿರುವ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದಂಗವಾಗಿ ಭಾನುವಾರ ಭವ್ಯ ರಥೋತ್ಸವ ಜರುಗಿತು   

ತಾಳಿಕೋಟೆ: ಪಟ್ಟಣದ ಆರಾಧ್ಯ ದೈವ ವೆನಿಸಿರುವ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಭಾನುವಾರ ರಥೋತ್ಸವ ಸಡಗರ ಸಂಭ್ರಗಳಿಂದ ಅದ್ದೂರಿಯಾಗಿ ನೆರವೇರಿ ಸಲ್ಪಟ್ಟಿತು.

ಸುಂದರವಾಗಿ ಬಣ್ಣ ಮಾಡಿದ ತೇರಿಗೆ ಹೂ-ಹಾರ ತೋರಣಗಳಿಂದ ಭವ್ಯವಾಗಿ ಅಲಂಕೃತಗೊಳಿಸಲಾಗಿತ್ತು. ತೇರಿನಲ್ಲಿ ಖಾಸ್ಗತ ಶಿವಯೋಗಿಗಳ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

  ಜಾತ್ರೆಗ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಭಕ್ತ ಜನತೆಯ ಜಯ ಘೋಷದೊಂದಿಗೆ ಖಾಸ್ಗತೇಶ್ವರ ಮಠದಿಂದ ಶ್ರಿ ಅಂಬಾಭವಾನಿ  ಮಂದಿರದವರೆಗೆ ರಥೋತ್ಸವ ಜರುಗಿತು. ರಥೋತ್ಸವದಲ್ಲಿ  ಬಾಳೆ ಹಣ್ಣು, ಉತ್ತತ್ತಿ ಹೂಮಾಲೆ ಎಸೆದು ಸಂಭ್ರಮಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಗಂಗಸ್ಥಳ ಮುಗಿಸಿದ ವಿರಕ್ತ ಮಹಾಸ್ವಾಮಿಗಳ ಭವ್ಯ ಮೂರ್ತಿಯನ್ನು ಅಲಂಕೃತ ಆನೆ ಅಂಬಾರಿ ಮೇಲೆ ಕೂಡ್ರಿಸಿ  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.  ಮೆರವಣಿಗೆಯಲ್ಲಿ  ಕಳಸ ಹಾಗೂ ಪಲ್ಲಕ್ಕಿ ಉತ್ಸವ  ಬ್ಯಾಂಜೋ, ಭಾಜಾ ಭಜಂತ್ರಿ, ಭಜನಾ ಮಂಡಳಿ ಸಹ ಸೇರಿ ಮೆರವಣಿಗೆಗೆ ವಿಶೇಷ ಮೆರುಗು ನೀಡಿದ್ದವು.

ಸ್ಪಂದನ ತರುಣ ಸಂಘದವರು ಹಾಗೂ ಎಸ್.ಕೆ.ಲಕ್ಕಿಡಿಪ್ ನವರು ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗಾಗಿ ಬದಾಮಿ ಹಾಲು ಹಾಗೂ ಪೇರಲ ಹಣ್ಣಿನ ವಿತರಣೆ  ವ್ಯವಸ್ಥೆ ಮಾಡಿದ್ದರು. ದಾರಿಯುದ್ದಕ್ಕೂ ಅಂಗಡಿ- ಮುಂಗಟ್ಟುಗಳ ವ್ಯಾಪಾರಸ್ಥರು, ಜನತೆ, ವಿರಕ್ತಶ್ರಿಗಳ ದರ್ಶನ ಮತ್ತು ಆಶೀರ್ವಾದ ಪಡೆದರು,
ಗುರುಪೂರ್ಣಿವೆು ಇಂದು

ವಿಜಾಪುರ: ಇಲ್ಲಿಯ ಕೊಲ್ಹಾರ ರಸ್ತೆಯ ಸತ್ಯಸಾಯಿ ಮಂದಿರದಲ್ಲಿ ಗುರುಪೂರ್ಣಿಮೆ ಅಂಗವಾಗಿ ಇದೇ 22 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10ಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಸಂಜೆ 5ಕ್ಕೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದು ಸತ್ಯ ಸಾಯಿ ಸೇವಾ ಸಂಘದ ಪ್ರಕಟಣೆ ತಿಳಿಸಿದೆ.

ಧರಣಿ ಸತ್ಯಾಗ್ರಹ 
ವಿಜಾಪುರ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಸೇವಾ ಸಂಘದ ನೇತೃತ್ವದಲ್ಲಿ ಇಲ್ಲಿಯ ಶಿವಾಜಿ ಚೌಕ್‌ನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಭಾನುವಾರ 5ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ಗಮನ ಸೆಳೆ ಯಲು ಇದೇ 23 ರಂದು ನಗರದಲ್ಲಿ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ.

ಈ ರ‌್ಯಾಲಿ ಯಲ್ಲಿ ತಿಕೋಟಾ ಹಾಗೂ ವಿವಿಧ ಗ್ರಾಮದ ಮರಾಠಾ ಸಮಾಜದ ಮುಖಂಡರು ಭಾಗವಹಿಸಬೇಕು ಎಂದು ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶಿಂಧೆ ತಿಳಿಸಿದರು. ಧರಣಿ ಯಲ್ಲಿ ಎ.ಎ. ಪವಾರ, ಎಂ.ಬಿ. ಜಾಧವ್ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.