ADVERTISEMENT

`ಮಕ್ಕಳ ಆರೋಗ್ಯಕ್ಕೆ ಕಬ್ಬಿಣಾಂಶದ ಮಾತ್ರೆ ಅಗತ್ಯ'

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 5:24 IST
Last Updated 19 ಜುಲೈ 2013, 5:24 IST

ಇಂಡಿ: ಹದಿಹರೆಯದವರಲ್ಲಿ ಕಬ್ಬಿ ಣಾಂಶದ ಕೊರತೆಯಿಂದ ಉಂಟಾ ಗುವ ರಕ್ತಹೀನತೆ ತಡೆಗಟ್ಟಲು ಮತ್ತು ಸದೃಢ ಆರೋಗ್ಯಕ್ಕೆ ಭಾರತ ಸರ್ಕಾರ ಜಾರಿಗೆ ತಂದಿರುವ ಕಬ್ಬಿಣಾಂಶದ ಮಾತ್ರೆಗಳ ಸೇವನೆ ಅತ್ಯವಶ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ, ಪರಶು ರಾಮ ದೇವಮಾನೆ ಅಭಿಪ್ರಾಯ ಪಟ್ಟರು.

ಅವರು ಕಳೆದ ಬುಧವಾರ ಇಂಡಿ ತಾಲ್ಲೂಕಿನ ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭೂಜಿ ಪ್ರೌಢ ಶಾಲೆಯ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಣೆ ಮಾಡಿ ಮಾತನಾಡಿದರು.

ಭಾರತ ಶೇ.22.5 ರಷ್ಟು ಜನಸಂಖ್ಯೆ ಯುವಕರನ್ನು ಒಳಗೊಂಡಿದೆ. ಅವರ ಆರೋಗ್ಯ ಸದೃಢವಾಗಲು ಮತ್ತು ಆರೋಗ್ಯ ಕಾಪಾಡಲು ಈ ಮಾತ್ರೆಗಳು ಅಗತ್ಯವಾಗಿ ಬೇಕು. ಇದನ್ನು ಮಕ್ಕಳು ತಪ್ಪದೇ ಸೇವಿಸಬೇಕು. ಈ ಮಾತ್ರೆ ಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯದ ತಂತ್ರಜ್ಞ ಕೆಂಭಾವಿ ಅವರು ಕೆಲವು ಶಾಲಾ ಮಕ್ಕಳ ರಕ್ತ ಪರೀಕ್ಷೆ ಮಾಡಿ ಅವರ ಹೀಮೋ ಗ್ಲೋಬಿನ್ ಪ್ರಮಾಣ ತೋರಿಸಿ ಕೊಟ್ಟರು.

ಮಹಾದೇವ ಮುರಗೋಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಗುರು ಆರ್.ಡಿ.ಬಿರಾದಾರ, ರಾಜೇಂದ್ರ ಬಿರಾದಾರ, ಕೆಂಭಾವಿ, ಸಿ.ಎಂ.ಮಟ್ಟಿಕಲ್ಲಿ, ಶಿವಾನಂದ ಹದಿಮೂರ, ಮಹಾದೇವ  ಜಂಬಗಿ, ಆನಂದ ಬರಡೋಲ, ವಿಠ್ಠಲ ಬೆಳ್ಳಗಿ, ಸಂಗಪ್ಪ ರಾಠೋಡ ವೇದಿಕೆ ಯಲ್ಲಿದ್ದರು. ವಾಸುದೇವ ದೊಡಮನಿ ಸ್ವಾಗತಿ ಸಿದರು. ವಿಶ್ವನಾಥ ಸಾತಲಗಾಂವ ನಿರೂಪಿಸಿದರು. ಎಂ.ಟಿ. ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.