ADVERTISEMENT

ಮನೆಗಳ್ಳರ ಬಂಧನ: 4.14 ಲಕ್ಷ ಮೌಲ್ಯದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 16:53 IST
Last Updated 8 ನವೆಂಬರ್ 2020, 16:53 IST
ತಾಳಿಕೋಟೆ ಪಟ್ಟಣದಲ್ಲಿ ಮನೆಗಳ್ಳರಿಂದ ವಶಪಡಿಸಿಕೊಂಡ ಚಿನ್ನದ ಆಭರಣಗಳು
ತಾಳಿಕೋಟೆ ಪಟ್ಟಣದಲ್ಲಿ ಮನೆಗಳ್ಳರಿಂದ ವಶಪಡಿಸಿಕೊಂಡ ಚಿನ್ನದ ಆಭರಣಗಳು   

ತಾಳಿಕೋಟೆ: ಪಟ್ಟಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಬಂಧಿತರಿಂದ ₹4.14 ಲಕ್ಷ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರದ ಇಂದಿರಾ ನಗರದ ನಿವಾಸಿ ಅಬೂಬಕರ್ ರಜಾಕಸಾಬ್ ಝಂಡೆ, ಬಾಗಾಯಿ ಗಲ್ಲಿಯ ನಿವಾಸಿ ಮಹಮ್ಮದ್ ಯುಸೂಫ್ ಅಯೂಬ್ ಕೋಟಿಹಾಳ ಹಾಗೂ ಅರಿಕೇರಿ ಗಲ್ಲಿಯ ಸಮೀರ ನಬಿಲಾಲ ಇನಾಮದಾರ ಬಂಧಿತ ಆರೋಪಿಗಳು.

ಬಂಧಿತರೆಲ್ಲರೂ ಸಹ ಹಗಲಿನಲ್ಲಿಯೇ ಮನೆಗಳನ್ನ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಡಿವೈಎಸ್ಪಿ ಈ.ಶಾಂತವೀರ, ಸಿಪಿಐ ಆನಂದ ವಾಗ್ಮೋಡೆ, ಪಿಎಸ್ಸೈಗಳಾದ ಶಿವಾಜಿ ಪವಾರ ಹಾಗೂ ಗಂಗು ಜಿ.ಬಿರಾದಾರ, ಎಎಸೈ ರಂಗಪ್ಪ ಬಂಗಿ, ಅಶೋಕ ನಾಯ್ಕೋಡಿ, ಗುರಪ್ಪ ನಾಯಕ, ಮಡಿವಾಳಪ್ಪ ಪಟ್ಟೇದ, ಗಿರಿಮಲ್ಲಪ್ಪ ಚಲವಾದಿ, ಶಿವುಕುಮಾರ ಬಿರಾದಾರ, ಸಂಗಮೇಶ ಚಲವಾದಿ, ಶಿವಾನಂದ ಕಾರಜೋಳ, ಗುಂಡು ಗಿರಣಿವಡ್ಡರ, ಚಂದ್ರು ಹತ್ತರಕಿ ಅವರು ಈ ಪ್ರಕರಣ ಭೇದಿಸುವಲ್ಲಿ ಶ್ರಮಿಸಿದ್ದು ಅವರಿಗೆ ಪ್ರಶಂಸಾ ಪತ್ರದೊಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.