ADVERTISEMENT

ನಂದಿ ಕಬ್ಬು ಬೆಳೆಗಾರರ ಸಂಘಕ್ಕೆ ₹64.36 ಲಕ್ಷ ಲಾಭ: ಶಶಿಕಾಂತಗೌಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:24 IST
Last Updated 23 ಸೆಪ್ಟೆಂಬರ್ 2022, 13:24 IST
ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿಯ ರೈತಭವನದಲ್ಲಿ ಬುಧವಾರ ನಡೆದ  ಕೃಷ್ಣಾನಗರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸದಸ್ಯರ ಪತ್ತಿನ ಸಹಕಾರ ಸಂಘ ಸಭೆಯಲ್ಲಿ ನಂದಿ ಶಿಕ್ಷಣ ಸಂಘದ ದಿ. ಬಿ.ಟಿ. ಪಾಟೀಲ ಮೆಮೋರಿಯಲ್ ಅಂತರರಾಷ್ಟ್ರೀಯ ವಸತಿ ಶಾಲೆಯ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪ‍ಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿಯ ರೈತಭವನದಲ್ಲಿ ಬುಧವಾರ ನಡೆದ  ಕೃಷ್ಣಾನಗರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸದಸ್ಯರ ಪತ್ತಿನ ಸಹಕಾರ ಸಂಘ ಸಭೆಯಲ್ಲಿ ನಂದಿ ಶಿಕ್ಷಣ ಸಂಘದ ದಿ. ಬಿ.ಟಿ. ಪಾಟೀಲ ಮೆಮೋರಿಯಲ್ ಅಂತರರಾಷ್ಟ್ರೀಯ ವಸತಿ ಶಾಲೆಯ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪ‍ಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ವಿಜಯಪುರ: ಕೃಷ್ಣಾನಗರ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸದಸ್ಯರ ಪತ್ತಿನ ಸಹಕಾರ ಸಂಘವು 2021-22ನೇ ಸಾಲಿನಲ್ಲಿ ₹64.36 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷಶಶಿಕಾಂತಗೌಡ ಭೀ. ಪಾಟೀಲ ತಿಳಿಸಿದರು.

ಬಬಲೇಶ್ವರ ತಾಲ್ಲೂಕಿನ ಚಿಕ್ಕಗಲಗಲಿಯ ರೈತಭವನದಲ್ಲಿ ಬುಧವಾರ ನಡೆದ ಸಂಘದ 13ನೇ ವಾರ್ಷಿಕ ಸರ್ವ ಸಾಧಾರಣಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಲಾಭ ಗಳಿಸಲು ಸರ್ವ ಸದಸ್ಯರು, ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಮತ್ತು ಸಿಬ್ಬಂದಿಯವರ ಪ್ರಾಮಾಣಿಕ ಸೇವೆ ಕಾರಣವಾಗಿದೆ ಎಂದು ಹೇಳಿದರು.

ADVERTISEMENT

ಸಂಘವು ನೂತನ ಕಟ್ಟಡದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಶೀಘ್ರದಲ್ಲೇ ತನ್ನ ನೂತನ ಶಾಖೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಸದಸ್ಯರಿಗೆ ತ್ವರಿತ ಸೇವೆ ಒದಗಿಸಲು ಸಂಘದ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಕಿಂಗ್‌ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ ಎಂದರು.

ಸನ್ಮಾನ:ನಂದಿ ಶಿಕ್ಷಣ ಸಂಘದ ದಿ. ಬಿ.ಟಿ. ಪಾಟೀಲ ಮೆಮೋರಿಯಲ್ ಅಂತರರಾಷ್ಟ್ರೀಯ ವಸತಿ ಶಾಲೆಯ 10ನೇ ತರಗತಿ ಸಿ.ಬಿ.ಎಸ್.ಇ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ₹25ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹ 10 ಸಾವಿರ ಹಾಗೂ ನಂತರದ ಸ್ಥಾನದ ಪಡೆದ 5 ಜನ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ₹ 20 ಸಾವಿರ ಮೊತ್ತದ ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಎಸ್. ಟಿ. ಪಾಟೀಲ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಮೇಶ ಗಿರಗಾಂವಿ, ಸುನೀಲ ನ್ಯಾಮಗೌಡ್ರ, ನಿರ್ದೇಶಕರಾದ ರಮೇಶ ಜಕರಡ್ಡಿ, ರಾಮಪ್ಪ ಶೇಬಾನಿ, ಸಿದ್ದಣ್ಣ ದೇಸಾಯಿ, ವೆಂಕಟೇಶ ಬಿದರಿ, ಹಣಮಂತ ಕೊಣ್ಣೂರ, ಜಯಕುಮಾರ ಬಿರಾದಾರ, ಸುನೀಲಕುಮಾರ ನ್ಯಾಮಗೌಡರ, ಚಂದ್ರಶೇಖರ ಪಾಟೀಲ, ಲತಾ ಬಿ.ಪಾಟೀಲ, ವಿಮಲಾ ತಿಪರಡ್ಡಿ, ಹಣಮಂತ ಕಡಪಟ್ಟಿ, ಲಚ್ಚಪ್ಪ ಖಜ್ಜಿಡೋಣಿ, ರಾಮಪ್ಪ ಹರಿಜನ, ಬಸಪ್ಪ ಸಂಜೀವಪ್ಪಗೋಳ ಹಾಗೂ ಸದಸ್ಯರು, ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.