ADVERTISEMENT

ಅಪಹರಣ: ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2021, 16:18 IST
Last Updated 7 ಮೇ 2021, 16:18 IST
ಸಿಂದಗಿ ಠಾಣೆ ಪೊಲೀಸರು ಬಂಧಿಸಿರುವ ದರೋಡೆಕೋರರು
ಸಿಂದಗಿ ಠಾಣೆ ಪೊಲೀಸರು ಬಂಧಿಸಿರುವ ದರೋಡೆಕೋರರು   

ವಿಜಯಪುರ: ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ತಾಲ್ಲೂಕಿನ ಹಂದ್ರಾಳ ಗ್ರಾಮದ ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕ ಸಿದ್ದಣ್ಣ ಪೂಜಾರಿ ಎಂಬುವವರನ್ನು ಅಪಹರಿಸಿ, ₹ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದರೋಡೆಕೋರರನ್ನು ಸಿಂದಗಿ ಠಾಣೆ ಪೊಲೀಸರು ಪ್ರಕರಣ ನಡೆದು ಕೇವಲ ಒಂದೇ ದಿನದೊಳಗೆ ಬಂಧಿಸಿದ್ದಾರೆ.

ದರೋಡೆಕೋರರಾದ ದೇವಣಗಾಂವದ ರಮೇಶ ಸೊಡ್ಡಿ, ಆಲಮೇಲದ ಮಹ್ಮದಲಿ ಕಲ್ಮನಿ(26), ಅಫಝಲಪುರದ ಸತೀಶ ಆರೇಕರ(32), ದೇವಣಗಾಂವದ ರಾಜು ನಧಾಪ(22), ಅಫಝಲಪುರದ ಇಸ್ಮಾಯಿಲ್‌ ಕೊತಂಬರಿ ಮತ್ತು ದೇವಣದಾಗವರ ಜಮೀರ ಆಲಮೇಲ(25) ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಂಧಿತರಿಂದ ಒಂದು ನಾಡ ಪಿಸ್ತೂಲ್‌, 5 ಜೀವಂತ ಗುಂಡು ಹಾಗೂ ಪ್ರಕರಣಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ADVERTISEMENT

ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕಗುರುವಾರ ಜೇವರ್ಗಿ ತಾಲ್ಲೂಕಿನ ಹುಲ್ಲೂರ ಗ್ರಾಮದಿಂದ ಅಫಝಲಪುರಕ್ಕೆ ಹೋಗುವಾಗ ಬಗಲೂರ ಗ್ರಾಮದ ಬಳಿ ಅಡ್ಡಗಟ್ಟಿ ಅಪಹರಣ ಮಾಡಿದ್ದರು. ಬಳಿಕ ದರೋಡೆಕೋರರು ನಾಡ ಪಿಸ್ತೂಲ್‌ ತೋರಿಸಿ ಬೆದರಿಸಿ, ಅವರ ಮಗನಿಗೆ ₹ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರ್ಯಾಚರಣೆ ನಡೆಸಿದ ಸಿಂದಗಿ ಸಿಪಿಐ ಎಚ್‌.ಎಂ.ಪಾಟೀಲ್‌, ಪಿಎಸ್‌ಐಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.