ADVERTISEMENT

ಆಲಮೇಲ | ಮೌಲ್ಯಾಧಾರಿತ ಶಿಕ್ಷಣ ಕೊರತೆಯಿಂದ ನೈತಿಕ ಅದಃಪತನ: ಕಳವಳ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 2:18 IST
Last Updated 17 ಫೆಬ್ರುವರಿ 2026, 2:18 IST
ಆಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದ ಟಕ್ಕಳಕಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು
ಆಲಮೇಲ ತಾಲ್ಲೂಕಿನ ಬಳಗಾನೂರ ಗ್ರಾಮದ ಟಕ್ಕಳಕಿ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಗಣ್ಯರು ಉದ್ಘಾಟಿಸಿದರು   

ಆಲಮೇಲ: ‘ಇಂದು ಶಿಕ್ಷಣ ವ್ಯವಸ್ಥೆಯು ಮೌಲ್ಯಾಧಾರಿತ ಶಿಕ್ಷಣಕ್ಕಿಂತ ಹೆಚ್ಚಾಗಿ ಅಂಕ ಮತ್ತು ಉದ್ಯೋಗ ಆಧಾರಿತವಾಗಿದೆ. ಇದು ನೈತಿಕ ಅಧಃಪತನಕ್ಕೆ ಕಾರಣವಾಗಿದೆ’ ಎಂದು ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌದರಿ ಹೇಳಿದರು.

ತಾಲ್ಲೂಕಿನ ಬಳಗಾನೂರು ಗ್ರಾಮದ ಬಿ.ಬಿ. ಟಕ್ಕಳಕಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ 3ನೇ ವಾರ್ಷಿಕೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಭೌತಿಕ ಸುಖ, ತಂತ್ರಜ್ಞಾನದ ಅತಿಯಾದ ಬಳಕೆ ಮತ್ತು ಮಾನವೀಯ ಮೌಲ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳಲ್ಲಿ ಸ್ವಾರ್ಥ ಮತ್ತು ಅಪರಾಧ ಮನೋಭಾವ ಹೆಚ್ಚುತ್ತಿದೆ. ಶಿಕ್ಷಣದಲ್ಲಿ ಸಂಸ್ಕಾರ, ಸಂವೇದನೆ ಮತ್ತು ಗುರು-ಹಿರಿಯರ ಗೌರವ ಮಾಯವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ನಾನಗೌಡ ಪಾಟೀಲ ನಾಗರಹಳ್ಳಿ ಮಾತನಾಡಿದರು. ಸ್ಥಳೀಯ ಹವಾ ಮಲ್ಲಿನಾಥಾಶ್ರಮದ ರಾಚಯ್ಯ ಮಠಪತಿ, ಹಿಕ್ಕನಗುತ್ತಿ ಲಿಂಗಾಯತ ಮಹಾಮಠದ ಪ್ರಭುಲಿಂಗ ಶರಣರು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಗುರಣ್ಣ ಟಕ್ಕಳಕಿ, ಕಾರ್ಯದರ್ಶಿ ವಿದ್ಯಾಧರ ಟಕ್ಕಳಕಿ, ಆರೋಗ್ಯ ಅಧಿಕಾರಿ ಭೀಮಾಶಂಕರ ಮಠಪತಿ, ಸಂಪನ್ಮೂಲ ವ್ಯಕ್ತಿ ಗುರುದೇವ ಬಳುಂಡಗಿ, ಕೆಂಚಪ್ಪ ಕತ್ನಲ್ಲಿ, ಗುರು ಹುಲ್ಲೂರ, ದಿಗಂಬರ ನಾಟಿಕಾರ, ಭಾಗಪ್ಪ ಟಕ್ಕಳಕಿ, ರಾಯಪ್ಪ ಗೋಲಸರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.