ADVERTISEMENT

‘ಬಸವಣ್ಣನ ಸಿದ್ಧಾಂತಗಳು ಮಾನವ ಕುಲಕ್ಕೆ ದಾರಿದೀಪ’

ವಿಜಯಪುರ ಜಿಲ್ಲೆಯಾದ್ಯಂತ ಬಸವ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 15:05 IST
Last Updated 7 ಮೇ 2019, 15:05 IST
ವಿಜಯಪುರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಮಹಾರಾಷ್ಟ್ರದ ಅಹಮದ್‌ ನಗರದ ಡಾ.ಶಿವಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಲಾಯಿತು
ವಿಜಯಪುರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಮಹಾರಾಷ್ಟ್ರದ ಅಹಮದ್‌ ನಗರದ ಡಾ.ಶಿವಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಬಸವ ಜಯಂತಿ ಆಚರಿಸಲಾಯಿತು   

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳು, ಶಾಲಾ–ಕಾಲೇಜು, ಸಂಘ–ಸಂಸ್ಥೆಗಳಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ಡಾ.ಫ.ಗು.ಹಳಕಟ್ಟಿ ಭವನ:

ನಗರದ ಬಿಎಲ್‌ಡಿಇ ಸಂಸ್ಥೆಯ ‘ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಭವನ’ದಲ್ಲಿ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ADVERTISEMENT

ಡಾ.ಸಂಜಯ ಕಡ್ಲಿಮಟ್ಟಿ ಮಾತನಾಡಿ, ‘ಕೆಲ ಪಟ್ಟಭದ್ರಹಿತಾಸಕ್ತಿಗಳು ವೇದಗಳಂತಹಅಪರೂಪದ ಜ್ಞಾನ ಸಂಪತ್ತನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು, ಸಾಮಾನ್ಯರಿಗೆ ಆ ಜ್ಞಾನವನ್ನು ತಲುಪಿಸದ ಕಾರಣ ವಚನಗಳಂತಹಹೊಸ ಜ್ಞಾನ ಸಂಪತ್ತು ಉದಯಿಸಲು ಕಾರಣವಾಯಿತು. ಪರರಿಗೆ ಜ್ಞಾನ ನೀಡುವವ ಬ್ರಾಹ್ಮಣ, ಅನ್ಯಾಯದ ವಿರುದ್ಧ ಹೋರಾಡುವವ ಕ್ಷತ್ರೀಯ, ನಿತ್ಯದ ವ್ಯವಹಾರ ಮಾಡುವವ ವೈಶ್ಯ, ಕಾಯಕದಲ್ಲಿ ನಿರತನಾದವ ಶೂದ್ರ ಎಂದು ವ್ಯಾಖ್ಯಾನಿಸಿದ ಅವರು ಪ್ರತಿಯೊಬ್ಬನಲ್ಲಿಯೂ ಈ ನಾಲ್ಕು ಗುಣಗಳು ಇರುತ್ತವೆ. ಆದರೆ, ಕೆಲವು ಪುರೋಹಿತ ಶಾಹಿಗಳು ಇದನ್ನು ವರ್ಗಗಳಾಗಿ ವಿಂಗಡಿಸಿ, ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡರು’ ಎಂದರು.

ಸಾಹಿತಿ ಪ್ರೊ.ಸಿದ್ದಣ್ಣ ಲಂಗೋಟಿ ಮಾತನಾಡಿದರು. ಚಿಂತನ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಆರ್.ಬನಸೋಡೆ, ಸಾಕ್ಷಿ ಹಿರೇಮಠ, ಕೆ.ಎಸ್.ಬಿರಾದಾರ, ಡಾ.ಎಂ.ಎಸ್.ಮದಬಾವಿ, ಡಾ.ವಿ.ಡಿ.ಐಹೊಳ್ಳಿ, ಎ.ಎಸ್.ಪಾಟೀಲ, ಶ್ರೀಶೈಲ ಕಾಗಲ, ರಾಜೇಂದ್ರಕುಮಾರ ಬಿರಾದಾರ, ಜೆ.ಎಸ್.ಗಲಗಲಿ, ಶಶಿಧರ ಸಾತಿಹಾಳ, ಬಿ.ಎಸ್.ಕೋನರೆಡ್ಡಿ, ಸಿ.ಎ.ಗಂಟೆಪ್ಪಗೋಳ ಇದ್ದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿ:

ವಿಜಯಪುರ ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬಸವ ಜಯಂತಿ ಹಾಗೂ ಡಾ.ನಾರಾಯಣ ಹರ್ಡೇಕರ ಜಯಂತಿ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿ, ‘ಬಸವಣ್ಣನವರ ಸಿದ್ಧಾಂತಗಳು ವಿಶ್ವ ಮಾನವ ಕುಲಕ್ಕೆ ದಾರಿ ದೀಪವಾಗಿದ್ದು, ಅವುಗಳನ್ನು ಇಂದಿನ ಯುವಕರು ಅಳವಡಿಸಿಕೊಂಡಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ದೇಶ ಅಭಿವೃದ್ಧಿಯತ್ತ ಸಾಗಲು ಸಹಕಾರಿ ಆಗುತ್ತವೆ’ ಎಂದರು.

ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿದರು. ಶರಣಪ್ಪ ಯಕ್ಕುಂಡಿ, ಮಲ್ಲಿಕಾರ್ಜುನ ಗಬಸಾವಳಗಿ, ಸುರೇಶ ಘೊಣಸಗಿ, ಆರತಿ ಶಹಾಪುರ, ನಿಂಗಪ್ಪ ಸಂಗಾಪುರ, ಅನಿಲ್ ಸುರಗಿಹಳ್ಳಿ, ಚನ್ನಬಸಪ್ಪ ನಂದರಗಿ, ಹಮೀದ್‌ಭಾಷ ಅವಟಿ, ಸಾಹೇಬಗೌಡ ಬಿರಾದಾರ, ಮಲ್ಲು ತೊರವಿ, ತಾಜುದ್ದೀನ್‌ ಖಲೀಪ, ರಮಜಾನ್ ಹೆಬ್ಬಾಳ, ಅಮಿತ್ ಚವ್ಹಾಣ, ವಿಜಯ ಕಾಳೆ, ಬಾಬುಸಾಬ್‌ ಯಾಳವಾರ, ದಾವಲಸಾಬ್‌ ಬಾಗವಾನ ಇದ್ದರು.

ಭಾರತ ಸೇವಾ ದಳ ಕಚೇರಿ: ವಿಜಯಪುರ ನಗರದ ಭಾರತ ಸೇವಾದಳ ಕಚೇರಿಯಲ್ಲಿ ಬಸವ ಜಯಂತಿ ಹಾಗೂ ಡಾ.ನಾರಾಯಣ ಹರ್ಡೇಕರ ಜಯಂತಿ ಆಚರಿಸಲಾಯಿತು.

ಚಂದ್ರಕಾಂತ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಚ್.ಎಂ.ಮುಜಾವರ, ಎಂ.ಎನ್.ದಿಂಡೂರ ಮಾತನಾಡಿದರು. ಬಿ.ಎಸ್.ಕೋನರೆಡ್ಡಿ, ನಾಗೇಶ ಡೋಣೂರ, ಎಂ.ಐ.ಬೇಪಾರಿ, ಎಲ್.ಎಲ್.ತೊರವಿ, ಜಿ.ವೈ.ಕುಬಕಡ್ಡಿ, ಪರಶುರಾಮ ಭಜಂತ್ರಿ, ಎ.ಎಸ್.ರೂಪಣ್ಣವರ, ಆರ್.ವಿ.ಚವ್ಹಾಣ, ಲಕ್ಷ್ಮಣ, ಶಾಂತು ಸ್ಥಾವರಮಠ, ರೇವಣಸಿದ್ದಪ್ಪ ಸಜ್ಜನ ಮತ್ತಿತರರು ಇದ್ದರು.

ಜಿಲ್ಲಾ ಜೆಡಿಎಸ್‌ ಕಚೇರಿ: ವಿಜಯಪುರನಗರದ ಜಿಲ್ಲಾ ಜೆಡಿಎಸ್‌ ಕಾರ್ಯಾಲಯದಲ್ಲಿ ಬಸವ ಜಯಂತಿ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ‘ಬಸವಣ್ಣ ಸಮಾನತೆಯನ್ನು ಸಾರಿ ಸಮಾಜದಲ್ಲಿ ಮೇಲುಕೀಳೆಂಬಭಾವನೆ ತೊಡೆದುಹಾಕಿ, ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಇದೆ ಅಂತರಂಗ ಶುದ್ದಿ ಎಂದು ಸಾರಿ ವಿಶ್ವ ಧರ್ಮ ಸ್ಥಾಪಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ’ ಎಂದರು.

ಬಸು ಯಾದವಾಡ, ಖಾದ್ರಿ ಇನಾಮದಾರ, ಇಜಾಜ್‌ ಮುಖಬಿಲ್ಲ, ಯಾಕುಬ್‌ ಕೂಪರ, ಸೈಯ್ಯದ್‌ ಅಮೀನ್‌, ಮಹಾದೇವಿ ತಲಕೇರಿ, ರೇಖಾ ಮಾಶ್ಯಾಳ, ಸಾಜೀದ್‌ ರಿಸಾಲದಾರ, ಬಾಬು ಶಿರಣಗಾರ, ಸಾಜೀದ್‌ ಕನ್ನೂರ ಇದ್ದರು.

ಇಬ್ರಾಹಿಂಪುರ ರೈಲ್ವೆ ಗೇಟ್‌: ವಿಜಯಪುರನಗರದ ಇಬ್ರಾಹಿಂಪುರ ರೈಲ್ವೆ ಗೇಟ್‌ ಬಳಿ ಕರ್ನಾಟಕ ಚುಟುಕು ಸಾಹಿತ್ಯಪರಿಷತ್‌, ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆ ವತಿಯಿಂದ ಬಸವ ಜಯಂತಿ ಆಚರಿಸಲಾಯಿತು.

ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ಬಸವೇಶ್ವರ ಕರ್ಮವೀರ ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿದರು. ಜಗದೀಶ ಸಾಲಳ್ಳಿ, ಉಮೇಶ ಮಣೂರ, ಶರಣಗೌಡ ಪಾಟೀಲ, ಶೇಖರ ಹೂಗಾರ, ಎಸ್.ಬಿ.ಬಿರಾದಾರ, ಆರ್.ಎಸ್.ಹಿರೇಮಠ ಉಪಸ್ಥಿತರಿದ್ದರು. ಶ್ರೀಧರ ಬಿರಾದಾರ ಸ್ವಾಗತಿಸಿದರು. ಅನಿಲ ಗಂಗನಳ್ಳಿ ವಂದಿಸಿದರು.

ಸ್ಟೇಷನರಿ ವ್ಯಾಪಾರಸ್ಥರ ಸಂಘ: ವಿಜಯಪುರನಗರದ ಸ್ಟೇಷನರಿ ವ್ಯಾಪಾರಸ್ಥರ ಸಂಘ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಘದ ವತಿಯಿಂದ ಬಸವ ಜಯಂತಿ ಹಾಗೂ ಶಿವಾಜಿ ಜಯಂತಿ ಆಚರಿಸಲಾಯಿತು.

ಗಣ್ಯವರ್ತಕ ಶರಣು ಲಾಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ಲಾಳಸಂಗಿ, ವೀರೇಶ ಮಾದನಶೆಟ್ಟಿ, ಶಿವಾನಂದ ದುದ್ದಗಿ, ಅನಿಲ ಒಂಟಿ, ವಿಜಯ ಬಾಗಿ, ಗುರುರಾಜ ಪೂಜಾರಿ, ಸಂದೀಪ ಬಿರಾದಾರ, ದಶರಥ ಬೊಮ್ಮನಳ್ಳಿ, ಶ್ರೀಧರ ಕವಲಗಿ, ರವಿ ಮೋರೆ, ನಿತಿನ ಜಾಬಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.