ADVERTISEMENT

ಮುದ್ದೇಬಿಹಾಳ: 101 ಜನರ ರಕ್ತ ಲೇಪನ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:45 IST
Last Updated 7 ಮೇ 2025, 13:45 IST
ಮುದ್ದೇಬಿಹಾಳ ಪಟ್ಟಣದ ಮೇಲಿನ ಓಣಿಯಲ್ಲಿ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಸಮೀಕ್ಷೆಯ ಭಾಗವಾಗಿ ರಕ್ತಲೇಪನ ಸಂಗ್ರಹ ಮಾಡಲಾಯಿತು
ಮುದ್ದೇಬಿಹಾಳ ಪಟ್ಟಣದ ಮೇಲಿನ ಓಣಿಯಲ್ಲಿ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಸಮೀಕ್ಷೆಯ ಭಾಗವಾಗಿ ರಕ್ತಲೇಪನ ಸಂಗ್ರಹ ಮಾಡಲಾಯಿತು   

ಮುದ್ದೇಬಿಹಾಳ: ‘ಆನೆಕಾಲು ರೋಗ ಇರುವವರಿಗೆ ಕಚ್ಚಿದ ಸೊಳ್ಳೆ, ಆರೋಗ್ಯವಂತರಿಗೆ ಕಚ್ಚಿದರೆ ರೋಗ ಹರಡುತ್ತದೆ. ಸೊಳ್ಳೆ ಕಚ್ಚಿ 5ರಿಂದ 7 ವರ್ಷಗಳವರೆಗೆ ಸೋಂಕಿರುವುದು ತಿಳಿಯುವುದಿಲ್ಲ’ ಎಂದು ಆರೋಗ್ಯ ನಿರೀಕ್ಷಕ ಎಂ.ಎಸ್. ಗೌಡರ ಹೇಳಿದರು.

ಪಟ್ಟಣದ ಮೇಲಿನ ಓಣಿಯಲ್ಲಿ ಮಂಗಳವಾರ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಸಮೀಕ್ಷೆಯ ಅಂಗವಾಗಿ ರಕ್ತಲೇಪನ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರೀಕ್ಷೆಯಲ್ಲಿ ಸೋಂಕು ಪತ್ತೆಯಾದಲ್ಲಿ ಡಿಇಸಿ ಮಾತ್ರೆಗಳ ಮೂಲಕ ಅದನ್ನು ನಿಯಂತ್ರಿಸಬಹುದು. 101 ಜನರ ರಕ್ತ ಲೇಪನಗಳನ್ನು ಸಂಗ್ರಹಿಸಿದ್ದು, ಅವುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ತಲುಪಿಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಜನವಸತಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಹೇಳಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಎಸ್.ಆರ್. ಸಜ್ಜನ, ಇಸ್ಮಾಯಿಲ್ ವಾಲೀಕಾರ, ಆಶಾ ಕಾರ್ಯಕರ್ತೆಯರಾದ ಅಕ್ಕಮ್ಮ ಸಂಗಾರೆಡ್ಡಿ, ಮಹಾಲಿಂಗಮ್ಮ ಕಡಿ, ಸಾವಿತ್ರಿ ಹಿರೇಮಠ, ನಸೀಮಾಬೇಗಂ ಯಕಿನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.