ADVERTISEMENT

ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲು ಸಹಕಾರಿ: ಸ್ತ್ರೀರೋಗ ತಜ್ಞೆ ಶಾರದಾ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:12 IST
Last Updated 6 ಆಗಸ್ಟ್ 2025, 5:12 IST
ಸಿಂದಗಿ ಪಟ್ಟಣದ ಮೊಗಲಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್.ವಿ.ಪಾಟೀಲ ಉದ್ಘಾಟಿಸಿದರು
ಸಿಂದಗಿ ಪಟ್ಟಣದ ಮೊಗಲಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಭಾರತೀಯ ಮಕ್ಕಳ ತಜ್ಞರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್.ವಿ.ಪಾಟೀಲ ಉದ್ಘಾಟಿಸಿದರು   
‘ಮಗುವಿನ ಉತ್ತಮ ಆರೋಗ್ಯಕ್ಕೆ ಎದೆಹಾಲು ಸಹಕಾರಿ’

ಸಿಂದಗಿ: ‘ಸ್ತನ್ಯಪಾನವು ಶಿಶುಗಳನ್ನು ರಕ್ಷಿಸುತ್ತದೆ, ತಾಯಂದಿರನ್ನು ಸದೃಢಗೊಳಿಸುತ್ತದೆ ಹಾಗೂ ಕ್ಯಾನ್ಸರ್ ತಡೆಯುತ್ತದೆ’ ಎಂದು ಸ್ತ್ರೀರೋಗ ತಜ್ಞೆ ಶಾರದಾ ನಾಡಗೌಡ ಹೇಳಿದರು.

ಇಲ್ಲಿನ ಮೊಗಲಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಭಾರತೀಯ ಮಕ್ಕಳ ತಜ್ಞರ ಸಂಘ, ತಾಲ್ಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶಿಶು ಜನನದ ಒಂದು ಗಂಟೆಯಿಂದ ಎರಡು ವರ್ಷಗಳವರೆಗೆ ತಾಯಿ ಎದೆಹಾಲು ಮಾತ್ರ ನೀಡಬೇಕು. ಜೇನುತುಪ್ಪ ನೆಕ್ಕಿಸುವುದು, ನೀರು ಕುಡಿಸುವುದು ಮಾಡಬಾರದು’ ಎಂದು ತಿಳಿಸಿದರು.

ADVERTISEMENT

ಡಾ. ಶ್ರುತಿ ಸಜ್ಜನ ಮಾತನಾಡಿ, ‘ಎದೆಹಾಲು ಅಮೃತಕ್ಕೆ ಸಮಾನ. ಹೀಗಾಗಿ ತಾಯಂದಿರು ಮಕ್ಕಳಿಗೆ ಎದೆಹಾಲು ಕುಡಿಸಬೇಕು. ಅನೇಕ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಯುವ ಶಕ್ತಿ ಎದೆಹಾಲಿನಲ್ಲಿದೆ’ ಎಂದು ಸಲಹೆ ನೀಡಿದರು.

ಭಾರತೀಯ ಮಕ್ಕಳ ತಜ್ಞರ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಾ. ಎಸ್.ವಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಎದೆಹಾಲು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಎದೆಹಾಲಿನಲ್ಲಿರುವ ಕೊಲೆಸ್ಟ್ರಾಮ್ ಅಂಶ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಡಾ. ಸೀಮಾ ವಾರದ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವೈ.ಚೌಡಕಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಎ.ಎ.ಮಾಗಿ, ಜಿಲ್ಲೆಯ ಹಿರಿಯ ಮಕ್ಕಳ ತಜ್ಞರಾದ ಡಾ. ಸಿ.ಎಸ್.ಹಿರೇಗೌಡರ, ಡಾ. ಎಸ್.ಎಸ್.ಕಲ್ಯಾಣಶೆಟ್ಟಿ, ಡಾ.ಇಸ್ಮಾಯಿಲ್ ಮೊಗಲಾಯಿ, ವೈದ್ಯರಾದ ಸರೋಜಿನಿ ದಾನಗೊಂಡ, ನೂರಾನಿ ಮೊಗಲಾಯಿ, ಸುನಿತಾ ಹಿರೇಗೌಡರ, ಅಜೇಯ ದೇಸಾಯಿ, ತೌಷೀಫ್ ನಾಗರಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.